ಮೊದಲ ಹೆಂಡತಿಯನ್ನು ನೆನೆದು ಕಣ್ಣೀರಿಟ್ಟ ಜೈ ಜಗದೀಶ್..!!ಕಾರಣ ಏನ್ ಗೊತ್ತಾ..?

24 Oct 2019 11:56 AM | Entertainment
109 Report

ಅಂದಹಾಗೆ ಕನ್ನಡ ಬಿಗ್ ಬಾಸ್ ಸೀಸನ್ 7 ಪ್ರಾರಂಭವಾಗಿ ಸುಮಾರು 10 ದಿನಗಳೇ ಕಳೆದಿವೆ.. ಅದಾಗಲೇ ಬಿಗ್ ಬಾಸ್ ಮನೆಯಲ್ಲಿ ಜಗಳ ನೋವು ನಲಿವು ಎಲ್ಲವೂ ಕೂಡ ಶುರುವಾಗಿವೆ. ಅದೇ ರೀತಿ ಟಾಸ್ಕ್ ಗಳನ್ನು ಕೂಡ ಮಾಡುತ್ತಾ ಸಮಯವನ್ನು ಕಳೆಯುತ್ತಿದ್ದಾರೆ.  ನೆನ್ನೆಯಷ್ಟೆ 'ಬಿಗ್ ಬಾಸ್'ನಲ್ಲಿ ಸ್ಪರ್ಧಿಗಳಿಗೆ ಯಾರಿಗಾದರೂ ಕ್ಷಮೆ ಕೇಳದಿದ್ದರೆ ಕೇಳಬಹುದೆಂದು ಟಾಸ್ಕ್ ನೀಡಲಾಗಿದ್ದು, ಈ ವೇಳೆ ಜೈಜಗದೀಶ್ ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು ಸಹ ಸ್ಪರ್ಧಿಗಳ ಜೊತೆ ಹಂಚಿಕೊಂಡಿದ್ದಾರೆ.

ಸಿನಿಮಾ ಕ್ಷೇತ್ರಕ್ಕೆ ಬಂದ ಆರಂಭದಲ್ಲಿ ಜೈಜಗದೀಶ್ ಅವರಿಗೆ ಉತ್ತಮ ಅವಕಾಶಗಳು ಬಂದ ಕಾರಣ ಹಣ, ಅಹಂಕಾರ ಹೆಚ್ಚಾಗಿತ್ತಂತೆ.. ಅವರ ಜೀವನದಲ್ಲಿ ರೂಪಾ ಎಂಬುವವರು ಎಂಟ್ರಿ ಆಗಿದ್ದಾರೆ. ಯಾರಿಗೂ ಹೇಳದೇ, ಕೇಳದೇ ವಿಷ್ಣುವರ್ಧನ್ ನೆರವಿನೊಂದಿಗೆ ಮದುವೆ ಕೂಡ ಆಗಿದ್ದೂ 1982 ರಲ್ಲಿ ಒಬ್ಬಳು ಮಗಳು ಜನಿಸಿದ್ದಾಳೆ. 6 ವರ್ಷದ ಬಳಿಕ ರೂಪಾ ಮತ್ತು ಜೈಜಗದೀಶ್ ನಡುವೆ ಭಿನ್ನಾಭಿಪ್ರಾಯ ಬಂದಿದ್ದು, ದೂರವಾಗಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯಕ್ಕೆ ನಾವೇ ಕಾರಣವಿರಬಹುದು. ಆದರೆ ಮಗಳು ಏನು ತಪ್ಪು ಮಾಡಿದ್ದಳು. ಕ್ಷಮಿಸು ಎಂದು ಹೇಳುತ್ತಲೇ ಭಾವುಕರಾದ ಜೈಜಗದೀಶ್ ಬಿಕ್ಕಿಬಿಕ್ಕಿ ಅತ್ತಿದ್ದಾರೆ.. ಹಳೆಯ ನೆನಪುಗಳನ್ನು ನೆನಪಿಸಿದ ಬಿಗ್ ಬಾಸ್ ಗೆ ಧನ್ಯವಾದ ತಿಳಿಸಿದ್ದಾರೆ..

Edited By

Manjula M

Reported By

Manjula M

Comments