ಡ್ಯಾನ್ಸರ್ ಕಿಶನ್ ಹಿರಿಯ ನಟ ಜೈ ಜಗದೀಶ್ ಅವರ ಬಳಿ ಕ್ಷಮೆ ಕೇಳಿದ್ಯಾಕೆ…?

23 Oct 2019 11:33 AM | Entertainment
381 Report

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ -7, ಇತ್ತೀಚೆಗೆ ಶುರುವಾಗಿದ್ದು, ಅದಾಗಲೇ ಬಿಗ್ ಮನೆಯಲ್ಲಿ ಕೋಲಾಹಲ ಎದ್ದಿದೆ. ಭಾರೀ ಕುತೂಹಲವನ್ನು ಹುಟ್ಟಿಸಿರುವ ಬಿಗ್ ಬಾಸ್ ಮನೆಗಲ್ಲಿ ಜಗಳ ಆರಂಭವಾಗಿದೆ.

ಸೋಮವಾರ ಬಿಗ್ ಬಾಸ್ ಮನೆಯಲ್ಲಿ ಜೈ ಜಗದೀಶ್ ವಿರುದ್ಧ  ಸ್ಪರ್ಧಿ ಕಿಶನ್ ಗರಂ ಆಗಿದ್ದರು. ಬಳಿಕ ಮನೆಯ ಸದಸ್ಯರು ಹಿರಿಯರನ್ನು ಎಲ್ಲರ ಮುಂದೆ ರೀತಿ ಪ್ರಶ್ನಿಸಬಾರದು ಇದು ಅವರನ್ನು ಅವಮಾನ ಮಾಡಿದಂತೆ ಎಂದು ಹೇಳಿದ್ದರು.ಹೀಗಾಗಿ ಕಿಶನ್ ಮಂಗಳವಾರ ಜೈ ಜಗದೀಶ್ ಅವರ ಬಳಿ ಹೋಗಿ ಕ್ಷಮೆ ಕೇಳಿದ್ದಾರೆ. ಇನ್ನು ಕಿಶನ್ , ಜೈ ಜಗದೀಶ್ ಅವರ ಮುಂದೆ ನಾನು ಮಾಡಿದ್ದೂ ತಪ್ಪು, ನಾನು ಆ ರೀತಿ ಪ್ರಶ್ನೆ ಮಾಡಬಾರದಿತ್ತು. ನಾನು ಮಾತನಾಡಿದ್ದು ಇಷ್ಟು ದೊಡ್ಡ ವಿಷಯವಾಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಕಿಶನ್ ಜೈ ಜಗದೀಶ್ ಅವರಲ್ಲಿ ಕ್ಷಮೆ  ಕೇಳಿದ್ದಾರೆ.

Edited By

Manjula M

Reported By

Manjula M

Comments