ಅಗ್ನಿಸಾಕ್ಷಿ ಚಂದ್ರಿಕಾ ಗೆ ಮದುವೆಯಾಗಿದಂತೆ..!! ಹುಡುಗ ಯಾರ್ ಗೊತ್ತಾ..?

17 Oct 2019 10:20 AM | Entertainment
354 Report

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಷೋ ಗಲ್ಲಿ ಬಿಗ್ ಬಾಸ್ ಕೂಡ  ಒಂದು.. ಇದೀಗ ಬಿಗ್ ಬಾಸ್ ಸೀಸನ್ 7 ಪ್ರಾರಂಭವಾಗಿದೆ. ಕಳೆದ ಸೀಸನ್’ಗಳಲ್ಲಿ ಸೆಲಬ್ರೆಟಿಗಳ ಜೊತೆಗೆ ಕಾಮನ್ ಮ್ಯಾನ್ ಗಳು ಇರುತ್ತಿದ್ದರು. ಆದರೆ ಈ ಬಾರಿ ಕಾಮನ್ ಮ್ಯಾನ್ ಗಳು ಇಲ್ಲ,, ಕೇವಲ ಸೆಲಬ್ರೆಟಿಗಳು ಮಾತ್ರ ಈ ಬಾರಿ  ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗಾಸಿಪ್ ಗಳಿಗೇನು ಕಡಿಮೆ ಇಲ್ಲ…ಅಂತದೊಂದು ಗಾಸಿಪ್ ಇದೀಗ ಬಿಗ್ ಬಾಸ್  ಮನೆಯಲ್ಲಿ  ಸಖತ್ ಸದ್ದು ಮಾಡುತ್ತಿದೆ.

ಬಿಗ್ ಬಾಸ್ ಸೀಸನ್-7 ಸ್ಪರ್ಧಿ ಶೈನ್ ಶೆಟ್ಟಿ ನನ್ನ ಹಾಗೂ ಪ್ರಿಯಾಂಕಾ ಮದುವೆ ಆಗಿದೆ ಎಂಬ ಹೇಳಿಕೆಯೊಂದನ್ನು ನೀಡಿದ್ದಾರೆ.ಬುಧವಾರ ಟಾಸ್ಕ್ ಮುಗಿದ ನಂತರ ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್, ಪ್ರಿಯಾಂಕಾ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಶೈನ್, ಪ್ರಿಯಾಂಕಾ ಜೊತೆ ನನ್ನ ಮದುವೆ ಆಗಿದ್ದು, ಮಗು ಕೂಡ ಇದೆ. ನಮ್ಮ ಮಗುವನ್ನು ನಮ್ಮ ತಾಯಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.  ಇದನ್ನು ಕೇಳಿಸಿಕೊಂಡ ಪ್ರಿಯಾಂಕಾ, ಶೈನ್ ಶೆಟ್ಟಿ  ಸುಳ್ಳು ಹೇಳುತ್ತಿದ್ದಾರೆ. ನಮ್ಮಿಬ್ಬರ ಮದುವೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು. ದಯವಿಟ್ಟು ಇದನ್ನು ನಿಲ್ಲಿಸಲು ಹೇಳಿ ಬಿಗ್ ಬಾಸ್ ಬಳಿಕ ಮನವಿ ಮಾಡಿಕೊಂಡಿದ್ದಾರೆ. ಇದಾದ ಬಳಿಕವೂ ಶೈನ್, ಪ್ರಿಯಾಂಕಾ ಅವರನ್ನು ರೇಗಿಸಲು ಶುರು ಮಾಡಿದ್ದರು. ಆಗ ಪ್ರಿಯಾಂಕಾ, ಈಗ ಶೈನ್ ನನ್ನ ಅಣ್ಣ. ನಾನು ಅವರಿಗೆ ರಾಖಿ ಕಟ್ಟುತ್ತೇನೆ ಎಂದಿದ್ದಾರೆ.. ಆದರೂ ಇನ್ನೂ ಬಿಗ್ ಬಾಸ್ ಶುರುವಾಗಿ ಒಂದು ವಾರವೂ ಕೂಡ ಆಗಿಲ್ಲ… ಆಗಲೇ ಒಂದಿಷ್ಟು ಗಾಸಿಪ್ ಗಳು ಶುರುವಾಗಿದೆ.

Edited By

Manjula M

Reported By

Manjula M

Comments