ನಿರೂಪಕನಿಗೆ ಅಡಿಗೆ ಮಾಡಿಕೊಟ್ಟ ಕಿಚ್ಚ ಸುದೀಪ್..!! ಆ ನಿರೂಪಕ ಯಾರು..?
ಸ್ಯಾಂಡಲ್ ವುಡ್ ನ ಮಾಣಿಕ್ಯ, ಅಭಿನಯ ಚಕ್ರವರ್ತಿ ಸುದೀಪ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ… ಅದರ ನಡುವೆ ಬಿಗ್ ಬಾಸ್ ಕೂಡ ಶುರುವಾಗಿದೆ… ಇಷ್ಟೆಲ್ಲಾ ಕೆಲಸಗಳ ನಡುವೆ ಬ್ಯುಸಿಯಿರುವ ಕಿಚ್ಚ ಸುದೀಪ್ ಆ್ಯಂಕರ್ ಗೆ ಅಡುಗೆ ಮಾಡಿಕೊಟ್ಟಿದ್ದಾರೆ. ಇಷ್ಟೊಂದು ಬ್ಯುಸಿಯಿರುವ ಸುದೀಪ್ ಅಡಿಗೆ ಮಾಡಿಕೊಟ್ಟಿದ್ದು ಯಾರಿಗೆ ಎಂಬ ಪ್ರಶ್ನೆ ಮೂಡುವುದು ಸರ್ವೆ ಸಾಮಾನ್ಯ.. ಅದು ಬೇರೆ ಯಾರು ಅಲ್ಲ.. ನಟ ಕಮ್ ಆ್ಯಂಕರ್ ಅಕುಲ್ ಬಾಲಾಜಿ..
ಕಿಚ್ಚ ಸುದೀಪ್ ಅಂದ್ರೇನೇ ಒಂಥರಾ ಸಮ್ಥಿಂಗ್ . ನಟನೆಯಲ್ಲಿ ಅಭಿನಯ ಚಕ್ರವರ್ತಿ ಎನಿಸಿಕೊಂಡಿರುವ ಕಿಚ್ಚ ಸೂಪರ್ ಆಗಿ ಅಡುಗೆ ಮಾಡ್ತಾರೆ ಅನ್ನೋದು ಅವರ ಕೈ ರುಚಿ ತಿಂದವರು ಸದಾ ಹೇಳುತ್ತಿರುತ್ತಾರೆ. ಈಗ ಇದೇ ಸುದೀಪ್ ನಿರೂಪಕ ಅಕುಲ್ ಬಾಲಾಜಿಗೆ ಸ್ಪೆಷಲ್ ಅಡುಗೆಯೊಂದನ್ನ ಮಾಡಿಕೊಟ್ಟಿದ್ದಾರೆ. ಬಿಗ್ ಬಾಸ್ ಸೀನಸ್ 7 ರಲ್ಲಿ ಬ್ಯೂಸಿ ಇರೋ ಸುದೀಪ್, ಬ್ಯುಸಿ ಶೆಡ್ಯುಲ್ಡ್ ನಡುವೆಯೇ ಆ್ಯಂಕರ್ ಅಕುಲ್ ಬಾಲಾಜಿಗೆ ಅಡುಗೆ ಮಾಡಿಕೊಟ್ಟಿದ್ದಾರೆ. ಸ್ವತಃ ಅಕುಲ್ ಈ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಿಚ್ಚ ಬ್ರೋ ನನಗೆ ಸ್ಪೆಷಲ್ ಅಡುಗೆಯೊಂದನ್ನ ಮಾಡಿಕೊಟ್ಟಿದ್ದಾರೆ. ಯಮ್ಮಿ ಫಾರ್ ಟಮ್ಮಿ ಅಂತಾ ಸುದೀಪ್ ಜೊತೆಗಿನ ಸೆಲ್ಫಿ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅಕುಲ್ ಗೆ ಸುದೀಪ್ ಅಡಿಗೆ ಮಾಡಿರುವ ಪೊಟೋ ಸಖತ್ ವೈರಲ್ ಆಗುತ್ತಿದೆ.
Comments