ಕನ್ನಡ ಬಿಗ್ ಬಾಸ್ 7 ಪ್ರಸಾರಕ್ಕೆ ಮೂಹೂರ್ತ ಫಿಕ್ಸ್..! ಯಾವಾಗ ಗೊತ್ತಾ..?

11 Sep 2019 10:34 AM | Entertainment
565 Report

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಷೋಗಳಲ್ಲಿ ಬಿಗ್ ಬಾಸ್ ಕೂಡ ಒಂದು .. ಈಗಾಗಲೇ 6 ಸೀಜನ್ ಗಳನ್ನು ಮುಗಿಸಿರುವ  ಬಿಗ್ ಬಾಸ್ ಒಳ್ಳೆಯ ವೀಕ್ಷಕ ಬಳಗವನ್ನೆ ಸಂಪಾದಿಸಿಕೊಂಡಿದೆ. 6 ಸೀಜನ್ ಗಳನ್ನು ಮುಗಿಸಿರುವ ಬಿಗ್ ಬಾಸ್ 7 ನೇ ಸೀಜನ್ ಗೆ ಭರ್ಜರಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಅಕ್ಟೋಬರ್ ಎರಡನೇ ವಾರದಿಂದ 7 ನೇ ಸೀಸನ್ ಗೆ ಭರ್ಜರಿ ಸಿದ್ಧತೆ ಪ್ರಾರಂಭವಾಗಿದೆ..

ಪ್ರತಿ ಬಾರಿಯೂ ಕೂಡ ಕಾಮನ್ ಮ್ಯಾನ್ ಮತ್ತು ಸೆಲಬ್ರೆಟಿಗಳು ಇರುತ್ತಿದ್ದರು. ಆದರೆ ಈ ಬಾರಿ ಕೇವಲ ಸೆಲಬ್ರೆಟಿಗಳು ಮಾತ್ರ ಇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.  ಈ ಬಾರಿಯ ವಿಶೇಷಗಳನ್ನು ವಿವರಿಸುವ ಪ್ರೋಮೋ ಚಿತ್ರೀಕರಣದಲ್ಲಿ ಸೆ.11 ರಂದು ಕಿಚ್ಚ ಸುದೀಪ್ ಭಾಗವಹಿಸಲಿದ್ದಾರೆ.. ಸೆ. 13 ರಂದು ಪ್ರೋಮೋ ಪ್ರಸಾರವಾಗಲಿದೆಯಂತೆ...ಅ. 20 ರಂದು ಬಿಗ್ ಬಾಸ್ ಸೀಸನ್ 7 ಪ್ರಸಾರ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಸೀಸನ್ 7 ರಲ್ಲಿ ಹೊಸ ವಿಚಾರವೊಂದು ಹೊರಬಿದ್ದಿದ್ದು, ಕಳೆದ ಬಾರಿ ಸೆಲೆಬ್ರಿಟಿಗಳ ಜೊತೆ ಜನ ಸಾಮಾನ್ಯರು ಕೂಡ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಆದರೆ ಈವರ್ಷ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳು ಜೊತೆಯಾಗಿ ಭಾಗವಹಿಸಿದ್ದ ಎಪಿಸೋಡ್ ಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಂತೆ. ಸಿನಿಮಾ, ಕಿರುತೆರೆ ಹಾಗೂ ರಾಜಕೀಯ ಕ್ಷೇತ್ರದಿಂದ ಬಂದ ವ್ಯಕ್ತಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳಲು ವೀಕ್ಷಕರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಹಾಗಾಗಿ ಕೇವಲ ಸೆಲೆಬ್ರಿಟಿಗಳೇ ಈ ಬಾರಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.  ಹಾಗಾಗಿ ಕಾಮನ್ ಮ್ಯಾನ್ ಗಳು ನಾವು ಈ ಬಾರಿ ಹೋಗಬಹುದು ಎಂದಕೊಂಡಿದ್ದವರಿಗೆ ನಿರಾಸೆಯಾಗಿದೆ.

Edited By

Manjula M

Reported By

Manjula M

Comments