ರಾಕಿಂಗ್ ಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ನಡುವೆ ಸ್ಟಾರ್ ವಾರ್..!!!

10 Sep 2019 1:23 PM | Entertainment
995 Report

ಸದ್ಯ ಚಂದನವನದ ಮೇಲೆ ಯಾರ ಕಣ್ಣು ಬಿತ್ತೊ ಏನೋ ಸ್ಟಾರ್ ವಾರ್ ಗಳು ಶುರುವಾಗುತ್ತಿವೆ…. ಇತ್ತಿಚಿಗಷ್ಟೆ ಸುದೀಪ್ ಹಾಗೂ ದರ್ಶನ್ ನಡುವೆ ಈ ರೀತಿಯದ್ದೆ ಒಂದು ಸ್ಟಾರ್ ವಾರ್ ಮುಸುಕಿನಲ್ಲಿಯೇ ನಡೆಯುತ್ತಿದೆ. ಆದರೆ ಇದೀಗ ಈ ಬಾರಿ ಸ್ಟಾರ್ ವಾರ್ ಶುರುವಾಗಿರುವುದು ದಚ್ಚು ಕಿಚ್ಚನ ನಡುವೆ ಅಲ್ಲ ಬದಲಿಗೆ  ಯಶ್ ಹಾಗೂ ದರ್ಶನ್ ನಡುವೆ.. ಇದಕ್ಕೆ ಕಾರಣ ಅಗೈನ್ ಅಭಿಮಾನಿಗಳೇ..

ಚಂದನವನದ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಜಾಹೀರಾತಿಗಾಗಿ ಖಡಕ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದರು. ಆ ಫೋಟೋಗೆ ಯಶ್ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಜಾಹೀರಾತಿಗೆ ಸಂಬಂಧಪಟ್ಟಂತೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿದ್ದಾರೆ. “ಸೆಪ್ಟೆಂಬರ್ 16 ರಂದು ಬಿಯರ್ಡ್ ಅವರ ಗುರುಡು ಬರುತ್ತಿದೆ. ಚಂಡಮಾರುತದೊಂದಿಗೆ ಹೋರಾಡಲು ಸಿದ್ಧವಾಗಿ” ಎಂದು ವಿಡಿಯೋದಲ್ಲಿ ಪದಗಳ ಮೂಲಕ ತಿಳಿಸಿದ್ದಾರೆ. ಜಾಹೀರಾತಿನ ಪ್ರಮೋಷನ್​ಗಾಗಿ #BeardoBoss ಎನ್ನುವ ಹ್ಯಾಶ್​ಟ್ಯಾಗ್ ​ ಬಳಕೆ ಮಾಡಿದ್ದರು. ಈ ಟ್ವೀಟ್​ ನೋಡಿದ ಯಶ್​ ಫ್ಯಾನ್ಸ್​ ಹ್ಯಾಶ್​ ಟ್ಯಾಗ್​ ಅಡಿಯಲ್ಲಿ ಬಾಸ್​ ಯಶ್​ ಎಂದು ಬರೆದುಕೊಂಡಿದ್ದಾರೆ.ಈ ಯಶ್​ ಟ್ವೀಟ್​ ಮತ್ತು ಅದಕ್ಕೆ ಫ್ಯಾನ್ಸ್​ ರಿಯಾಕ್ಷನ್ ಇದೀಗ ಗಡ್ಡದ ವಿಚಾರದಿಂದಲೇ ಸ್ಯಾಂಡಲ್​ವುಡ್​ಗೆ ಬೆಂಕಿ ಹೊತ್ತಿಕೊಂಡಿದೆ. ಯಶ್ ಮಾಡಿದ #YashBoss ಟ್ವೀಟ್ ನೋಡಿ ಕೆಂಡವಾದ ದಚ್ಚು ಫ್ಯಾನ್ಸ್.ಚಿತ್ರರಂಗಕ್ಕೆ ಮೊದಲು ಬಂದವರು ದರ್ಶನ್, ದಚ್ಚು ಒಬ್ಬರೇ ಬಾಸ್.ಬಾಸ್ ಪಟ್ಟ ದರ್ಶನ್ ಬಿಟ್ಟು ಮತ್ಯಾರು ಬಳಸಬಾರದೆಂದು ಯಶ್ ಫ್ಯಾನ್ಸ್ ಗೆ ದಚ್ಚು ಫ್ಯಾನ್ಸ್​ ವಾರ್ನಿಂಗ್ ಮಾಡಿದ್ದಾರೆ. ಒಟ್ಟಿನಲ್ಲಿ ಒಂದಲ್ಲ ಒಂದು ವಿಷಯಕ್ಕಾಗಿ ಚಂದನವನದ ಸ್ಟಾರ್ ಗಳ ನಡುವೆ ಕಿಚ್ಚು ಹತ್ತಿಕೊಳ್ಳುತ್ತಿದೆ.. ಮುಂದಿನ ದಿನಗಳಲ್ಲಿ ಯಾವೆಲ್ಲಾ ರೀತಿಯ ಬದಲಾವಣೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments