ಮತ್ತೆ ಶುರುವಾಯ್ತ ಸ್ಟಾರ್ ವಾರ್ ..!! ದರ್ಶನ್ ಅಭಿಮಾನಿಯಿಂದ ಸುದೀಪ್ ಬಗ್ಗೆ ಅವಹೇಳನಕಾರಿ ಪೋಸ್ಟ್..!!!

10 Sep 2019 11:03 AM | Entertainment
253 Report

ಚಂದನವನದಲ್ಲಿ ಸ್ಟಾರ್ ವಾರ್ ಎಂಬುದು ಜೋರಾಗಿಯೇ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಕೂಡ ಯಾವುದನ್ನು ಎಲ್ಲಿಯೂ ಬಹಿರಂಗವಾಗಿ ತೋರಿಸಿಕೊಳ್ಳುತ್ತಿಲ್ಲ..ಒಂದು ಕಡೆ ದರ್ಶನ್, ಮತ್ತೊಂದು ಕಡೆ  ಸುದೀಪ್  ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.. ಅದಕ್ಕ ಪುಷ್ಟಿ ನೀಡುವಂತೆ ಒಂದಷ್ಟು ಘಟನೆಗಳು ಕೂಡ ನಡೆದವು.. ಇದೀಗ ಸ್ಟಾರ್ ನಟರು ಸುಮ್ಮನಿದ್ದರೂ ಕೂಡ ಅಭಿಮಾನಿಗಳು ಸುಮ್ಮನಾಗಿಲ್ಲ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಹೆಸರಿನ ಟ್ವಿಟರ್ ಪೇಜ್ ಒಂದರಲ್ಲಿ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿದ್ದು, ಇದೀಗ ಇದನ್ನು ದರ್ಶನ್ ಅಭಿಮಾನಿಗಳೇ ವಿರೋಧಿಸಿದ್ದಾರೆ.

ಪೈಲ್ವಾನ್ ಸಿನಿಮಾ ರಿಲೀಸ್ ಗೆ  ಎರಡೇ ದಿನ ಬಾಕಿಯಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಎಂದು ಹೇಳಿಕೊಳ್ಳುವ ಗುಂಪೊಂದು ತನ್ನ ಟ್ವಿಟರ್ ಪೇಜ್ ನಲ್ಲಿ ಇಬ್ಬರು ಸ್ಟಾರ್ ನಟರ ನಡುವೆ ಸಮರ ಶುರುವಾಗುವಂತೆ ಮಾಡಿದ್ದಾರೆ. ದರ್ಶನ್ ಸ್ವಂತ ಬಲದಿಂದ ಮೇಲೆ ಬಂದವರು. ಆದರೆ ಸುದೀಪ್ ಮೊದಲ ಸಿನಿಮಾವೇ ತಮ್ಮ ತಂದೆಯ ಮಾಲಿಕತ್ವದ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು. ಅಪ್ಪನ ದುಡ್ಡಿನಲ್ಲಿ ಮೇಲೆ ಬಂದವನು ಸ್ಯಾಂಡಲ್ ವುಡ್ ಉದ್ದಾರ ಮಾಡುತ್ತಾನಂತೆ ಎಂದು ಟ್ವಿಟರ್ ನಲ್ಲಿ ಅವಹೇಳನ ಮಾಡಿ ಬರೆಯಲಾಗಿದೆ. ಇದನ್ನು ನೋಡಿರುವ ದರ್ಶನ್ ಅಭಿಮಾನಿಗಳೇ ತಿರುಗೇಟು ನೀಡಿದ್ದು, ಸುಮ್ಮನೇ ಇಬ್ಬರು ಸ್ಟಾರ್ ಗಳ ನಡುವೆ ತಂದಿಡುವ ಕೆಲಸ ಮಾಡಬೇಡಿ. ಇಬ್ಬರ ಅಭಿಮಾನಿ ಗುಂಪುಗಳ ನಡುವೆ ಆಗಾಗ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಇದನ್ನು ಯಾರು ಮುಂದುವರೆಸಬೇಡಿ.. ಅವರವರ ಅಭಿಮಾನ ಅವರವರಿಗೆ ಎಂದು ಬುದ್ದಿವಾದ ಹೇಳಿದ್ದಾರೆ. ಒಟ್ಟಿನಲ್ಲಿ ಸ್ಟಾರ್ಗಳು ಸುಮ್ಮನಿದ್ದರು ಅಭಿಮಾನಿಗಳು ಸುಮ್ಮನಾಗುತ್ತಿಲ್ಲ.. ಇಬ್ಬರಿಗೂ ಕೂಡ ಹೋಲಿಕೆ ಮಾಡಿ ಮಾತನಾಡುತ್ತಿರುವ ಅಭಿಮಾನಿಗಳು ಆಗಿಂದಾಗೆ ಇಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ.

Edited By

Manjula M

Reported By

Manjula M

Comments