ಅಮ್ಮನಾದ ಖುಷಿಯಲ್ಲಿ ರಾಣಿ ಅಲಿಯಾಸ್ ಶ್ವೇತಾ ಚೆಂಗಪ್ಪ..

10 Sep 2019 10:26 AM | Entertainment
399 Report

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ರಾಣಿ ಅಂತಾನೇ ಫೇಮಸ್ ಆಗಿರುವ ಶ್ವೇತಾ ಚೆಂಗಪ್ಪ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನಾವು ಇದೀಗ ಮೂವರಾಗಿದ್ದೇವೆ. ನಮ್ಮ ತಾಯಿ, ತಂದೆ, ಕುಟುಂಬ, ಸ್ನೇಹಿತರು ಮತ್ತು ನಿಮ್ಮೆಲ್ಲರ ಶುಭಾಶಯ ಮತ್ತು ಪ್ರೀತಿಯಿಂದ ನಾನು ಹಾಗೂ ಕಿರಣ್ ನಮ್ಮ ಸಂತೋಷವನ್ನು ಸ್ವಾಗತಿಸಿದ್ದೇವೆ. ನಮಗೆ ಗಂಡು ಮಗುವಾಗಿದೆ ಎಂದು ತಮ್ಮ ಇನ್‍ಸ್ಟಾಗ್ರಾಂ ಬರೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಶ್ವೇತಾ ಮತ್ತು ಕಿರಣ್ ಇಬ್ಬರೂ ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ `ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಇದೀಗ ಅಮ್ಮನಾಗಿರುವುದಕ್ಕೆ ಅಭಿಮಾನಿಗಳು ಶ್ವೇತಾ ಅವರಿಗೆ ಶುಭಾಷಯ ತಿಳಿಸುತ್ತಿದ್ದಾರೆ.

Edited By

Manjula M

Reported By

Manjula M

Comments