ಸಿಎಂ ಯಡಿಯೂರಪ್ಪ ಗೆ ಚಾಲೆಂಜ್ ಹಾಕಿದ ಸ್ಯಾಂಡಲ್ ವುಡ್ ನಟಿ..!!
ಸ್ಯಾಂಡಲ್ವುಡ್’ನ ನಟಿ ಸೋನು ಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರಿಗೆ ಚಾಲೆಂಜ್ ಹಾಕಿದ್ದಾರೆ… ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರೆಗೆ ಸಾವಿರಾರು ರೂ ದಂಡ ವಿಧೀಸುತ್ತಿದ್ದೀರಲ್ಲ ಅದಕ್ಕೂ ಮೊದಲು ನೀವು ಮೊದಲು ಉತ್ತಮ ರಸ್ತೆಗಳನ್ನು ನಿರ್ಮಿಸಿ ಎಂದಿದ್ದಾರೆ. ಯಾಕೆಂದರೆ ಇದು ಸಾಮಾನ್ಯ ಜನರು ಕಷ್ಟಪಟ್ಟು , ದಿನವೆಲ್ಲಾ ದುಡಿದು ಸಂಪಾದಿಸಿಸುವ ಹಣ, ದಯವಿಟ್ಟು ಅವರ ಜೀವನವನ್ನು ಹಾಳು ಮಾಡಬೇಡಿ ಎಂದು ಸೋನು ಗೌಡ ಟ್ವೀಟ್ ಮಾಡಿದ್ದಾರೆ.
ಸೋನು ಗೌಡ ತಮ್ಮ ಟ್ವಿಟ್ಟರಿನಲ್ಲಿ ಸೋನು ಅವರು ಸವಾರನೊಬ್ಬ ಬೈಕಿನಿಂದ ಬೀಳುತ್ತಿರುವ ಫೋಟೋ ಹಾಕಿ ಆ ಫೋಟೋದಲ್ಲಿ, ಕುಡಿದು ಚಾಲನೆ – 10,000 ರೂ., ಜಂಪಿಂಗ್ ಟ್ರಾಫಿಕ್ ಲೈಟ್- 5,000 ರೂ., ಮೊಬೈಲ್ ಫೋನ್ ಬಳಕೆ – 5,000 ರೂ., ಅತಿವೇಗ – 5,000ರೂ ಹಾಗೂ ಸೀಟ್‍ಬೆಲ್ಟ್ ಧರಿಸದಿದ್ದರೆ – 1,000 ರೂ. ರಸ್ತೆಯಲ್ಲಿ ನಾವು ನೋಡಿದ ಗುಂಡಿಗಳಿಗೆ ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕು ಎಂದು ಪ್ರಶ್ನಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೆಚ್ಚು ದಂಡ ವಿಧಿಸುತ್ತಿದ್ದಾರೆ. ಇದರಿಂದ ವಾಹನ ಸವಾರರು ಬೇಸತ್ತು ಹೋಗಿದ್ದಾರೆ..
Comments