ಪೊಗರು ಸಿನಿಮಾ ಸೆಟ್ ನಲ್ಲಿ ಬೆಂಕಿ..!! ಕೂದಲೆಳೆಯಲ್ಲಿ ಪಾರಾದ ಆಕ್ಷನ್ ಪ್ರಿನ್ಸ್..!!!
ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯ ನಟರ ಸಾಲಿನಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಇದ್ದಾರೆ..ಚಂದನವನದಲ್ಲಿ ಬಹು ನಿರೀಕ್ಷಿತ ಸಿನಿಮಾವಾದ ಪೊಗರು ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಇದೀಗ ಪೊಗರು ಸಿನಿಮಾ ಸೆಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ ಪಾರಾಗಿದ್ದಾರೆ ಎನ್ನಲಾಗುತ್ತಿದೆ.
ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪೊಗರು ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಬೃಹತ್ ಸೆಟ್ ಹಾಕಲಾಗಿತ್ತು. ಫೈಟಿಂಗ್ ಶೂಟ್ ನಡೆಯುತ್ತಿದ್ದಾಗ ಅಗ್ನಿ ಅನಾಹುತ ಸಂಭವಿಸಿದ್ದು, ಸೆಟ್ ಬಹುತೇಕ ಸುಟ್ಟು ಬೂದಿಯಾಘಿದೆ. ಅಗ್ನಿ ಅವಘಡದಲ್ಲಿ ಧ್ರುವಾ ಸರ್ಜಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಪೊಗರು ಸಿನಿಮಾದ ಖಡಕ್ ದೃಶ್ಯಗಳಿಗಾಗಿ ವಿದೇಶಿ ಬಾಡಿ ಬಿಲ್ಡರ್ಸ್ ಕರೆತರಲಾಗಿತ್ತು. ನಂದಕಿಶೋರ್ ನಿರ್ಮಾಣದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಶಾನ್ವಿ ಶ್ರೀವಾತ್ಸವ್ ಸಹ ನಟಿಸಿದ್ದಾರೆ. ಫೆಬ್ರವರಿಯಲ್ಲಿ ಪೊಗರು ಚಿತ್ರದ ಎರಡನೇ ಹಂತದ ಶೂಟಿಂಗ್ ಆರಂಭವಾಗುತ್ತಿದೆ.
Comments