ನಟಿಗೆ ಕನ್ಯತ್ವ ಯಾವಾಗ ಕಳೆದುಕೊಂಡ್ರಿ ಎಂದ ಅಭಿಮಾನಿ..!!

05 Sep 2019 5:05 PM | Entertainment
647 Report

ಸೆಲಬ್ರೆಟಿಗಳು ಪದೆ ಪದೇ ಸುದ್ದಿಯಾಗುತ್ತಿರುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಕೆಲವೊಮ್ಮೆ ಸೆಲಬ್ರೆಟಿಗಳು ತಬ್ಬಿಬ್ಬಾಗುತ್ತಾರೆ.. ಇದೀಗ ಬಾಲಿವುಡ್ ನಟಿಗೂ ಕೂಡ ಇದೇ ರೀತಿಯ ಸಮಸ್ಯೆ ಎದುರಾಗಿದೆ.. ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಸ್ ಅವರು ಕನ್ಯತ್ವ ಯಾವಾಗ ಕಳೆದುಕೊಂಡ್ರಿ ಎಂದು ಕೇಳಿದ ಅಭಿಮಾನಿಗೆ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ..

ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಇಲಿಯಾನಾ ನನಗೆ ಪ್ರಶ್ನೆ ಕೇಳಿ ಎಂದು ಬರೆದುಕೊಂಡಿದ್ದರು. ಇದೇ ಸಮಯದಲ್ಲಿ ಇಲಿಯಾನಗೆ ಅಭಿಮಾನಿಗಳು ಪ್ರಶ್ನೆಯನ್ನು ಕೇಳಿದ್ದಾರೆ. ಕೆಲವರು ಅವರ ಮುಂದಿನ ಸಿನಿಮಾಗಳ ಬಗ್ಗೆ ಪ್ರಶ್ನಿಸಿದ್ದರೆ, ಮತ್ತೆ ಕೆಲವರು ಅವರ ಜೀವನದ ಬಗ್ಗೆ ಇಲಿಯಾನಾ ಅವರ ಇಷ್ಟ ಕಷ್ಟಗಳ ಬಗ್ಗೆ ಕೇಳಿದ್ದಾರೆ. ಇದೆಲ್ಲದರ ನಡುವೆ ವ್ಯಕ್ತಿಯೊಬ್ಬ ಇಲಿಯಾನಾ ಅವರಿಗೆ ನೀವು ಕನ್ಯತ್ವ ಯಾವಾಗ ಕಳೆದುಕೊಂಡ್ರಿ ಎಂದು ಪ್ರಶ್ನೆ ಮಾಡಿದ್ದಾನೆ... ಅಭಿಮಾನಿ ಪ್ರಶ್ನೆಗೆ ಕೆರಳಿದ ಇಲಿಯಾನಾ, “ನೀವು ಬೇರೆಯವರ ವಿಷಯಕ್ಕೆ ತುಂಬಾ ತಲೆ ಹಾಕುತ್ತೀರಾ. ನಿಮ್ಮ ತಾಯಿ ಏನು ಹೇಳುತ್ತಾರೆ” ಎಂದು ಉತ್ತರಿಸುವ ಮೂಲಕ ಗರಂ ಆಗಿದ್ದಾರೆ. ಇಲಿಯಾನಾ ಅವರ ಈ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೆಲೆಬ್ರೆಟಿಗಳ ವೈಯಕ್ತಿಕ ವಿಚಾರಕ್ಕೆ ಅಭಿಮಾನಿಗಳು ಹೆಚ್ಚು ತಲೆ ಕೆಡಿಸಿಕೊಳ್ಳುವುದುಂಟು.

Edited By

Manjula M

Reported By

Manjula M

Comments