ಸೃಜನ್ ಜತೆ ಸಂಬಂಧ ಕಲ್ಪಿಸಿದ್ದಕ್ಕೆ ಸಿಟ್ಟಾದ ನಟಿ ಮಜಾ ಟಾಕೀಸ್’ನ ರಾಣಿ..!!
ಸಾಮಾಜಿಕ ಜಾಲತಾಣಗಳಲ್ಲಿ ಸೆಲಬ್ರೆಟಿಗಳನ್ನು ತೇಜೋವಧೆ ಮಾಡುವುದು ಇತ್ತಿಚಿಗೆ ಕಾಮನ್ ಆಗಿಬಿಟ್ಟಿದೆ. ಸೆಲಬ್ರೆಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟೀವ್ ಆಗಿರುತ್ತಾರೆ. ಅದೇ ರೀತಿ ಅವರಿಗೆ ಅಭಿಮಾನಿಗಳ ಕಾಟವು ಕೂಡ ಹೆಚ್ಛಾಗಿಯೇ ಇರುತ್ತದೆ. ಮಜಾ ಟಾಕೀಸ್ ನ ರಾಣಿ ಅಲಿಯಾಸ್ ಶ್ವೇತ ಚೆಂಗಪ್ಪ ಅಭಿಮಾನಿಯ ಪ್ರಶ್ನೆಯಿಂದಾಗಿ ಬೇಸರಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹೆಚ್ಚು ಆಕ್ಟಿವ್ ಆಗಿರುವಂತೆ, ಅವರಿಗೆ ಅಭಿಮಾನಿಗಳ ಕಾಟವೂ ಹೆಚ್ಚಾಗುತ್ತಿದೆ. ಇದೀಗ ಅಭಿಮಾನಿಯೊಬ್ಬನ ಅಸಭ್ಯ ಪ್ರಶ್ನೆಯಿಂದ ನಟಿ ಶ್ವೇತಾ ಚೆಂಗಪ್ಪ ಸಿಟ್ಟಿಗೆದ್ದ ಪ್ರಕರಣ ನಡೆದಿದೆ.
ಸದ್ಯ ತುಂಬು ಗರ್ಭಿಣಿಯಾಗಿರುವ ಶ್ವೇತಾ ಚೆಂಗಪ್ಪ ಸದ್ಯಕ್ಕೆ ಮಜಾ ಟಾಕೀಸ್ ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅಮ್ಮನಾಗುತ್ತಿರುವ ಖುಷಿಯಲ್ಲಿರುವ ಶ್ವೇತಾ ಚೆಂಗಪ್ಪ ಪತಿ ಜೊತೆಗೆ ಫೋಟೋ ಶೂಟ್ ನಡೆಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಫೋಟೋಗಳನ್ನು ನೋಡಿದ ಅಭಿಮಾನಿಯೊಬ್ಬ ಶ್ವೇತಾಗೆ ಕಂಗ್ರಾಜ್ಯುಲೇಷನ್ಸ್. ಕೊನೆಗೂ ಸೃಜನ್ ಮಗುವಿಗೆ ತಾಯಿಯಾಗುತ್ತಿದ್ದೀರಿ, ಮಜಾ ಟಾಕೀಸ್ ಗೆ ಹೊಸ ಎಂಟ್ರಿ ಎಂದು ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದಿರುವ ಶ್ವೇತಾ ಆತನ ವಿರುದ್ದ ಕಿಡಿ ಕಾರಿದ್ದಾರೆ. 'ನನ್ನ ವೈಯಕ್ತಿಕ ವಿಚಾರಗಳಿಗೆ ಸೃಜನ್ ಲೋಕೇಶ್ ಜತೆಗೆ ಯಾಕೆ ಸಂಬಂಧ ಕಲ್ಪಿಸಿಕೊಳ್ಳುತ್ತೀರಿ? ಅಷ್ಟಕ್ಕೂ ನಾನಿಲ್ಲಿ ಮಜಾ ಟಾಕೀಸ್ ನ ರಾಣಿ ಪಾತ್ರ ಮಾಡ್ತಾ ಇಲ್ಲ. ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವಿನ ವ್ಯತ್ಯಾಸ ತಿಳಿದು, ನಿಮ್ಮ ಕಾಮೆಂಟ್ ಮಾಡಿ' ಎಂದು ಶ್ವೇತಾ ಸಿಟ್ಟಿನಿಂದಲೇ ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ವಾಸ್ತವ ಯಾವುದು, ಕಾಲ್ಪನಿಕ ಯಾವುದು ಎಂಬ ಅರಿವೆ ಇಲ್ಲದೆ ಅಭಿಮಾನಿಗಳು ಈ ರೀತಿ ಮಾಡುವುದು ಸೆಲಬ್ರೆಟಿಗಳನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತದೆ,
Comments