ಮೊದಲ ಬಾರಿಗೆ ಕಣ್ಣೀರಿಟ್ಟ ಯಶ್ ಕಾರಣ ಏನ್ ಗೊತ್ತಾ..?

27 Aug 2019 2:50 PM | Entertainment
499 Report

ರಾಕಿಂಗ್ ಸ್ಟಾರ್ ಯಶ್.. ಸ್ಯಾಂಡಲ್ವುಡ್ ನ ದಿಕ್ಕನ್ನೆ ಕೆಜಿಎಫ್ ಸಿನಿಮಾದ ಮೂಲಕ ಬದಲಿಸಿದ ನಟ.. ಸದ್ಯ ಕೆಜಿಎಫ್ 2 ಸಿನಿಮಾದಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ ಕಣ್ಣೀರಿಟ್ಟಿದ್ದಾರೆ.  ರಾಕಿಂಗ್ ಸ್ಟಾರ್ ಯಶ್ ಅವರು ಮೊದಲ ಬಾರಿಗೆ ಕಣ್ಣೀರು ಹಾಕಿರುವ ವಿಷಯದ ಕುರಿತು ಯಶ್ ಪತ್ನಿ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಆರ್ಯಾ ಗೆ ಕಿವಿ ಚುಚ್ಚಿಸಿದ್ದಾರೆ ಈ ವೇಳೆ ಯಶ್ ಕಣ್ಣಿರು ಹಾಕಿದ್ದಾರೆ ಎಂದು ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ..

ತಮ್ಮ ಮಗಳು ಐರಾ ಜೊತೆ ಕ್ಲಿಕ್ಕಿಸಿಕೊಂಡಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ…ರಾಧಿಕಾ ಪಂಡಿತ್ ಅವರು ಮಗಳಿಗೆ ಕಿವಿ ಚುಚ್ಚಿಸಿರುವ ಬಗ್ಗೆ ಹೇಳಿಕೊಂಡಿದ್ದು, ನಾವು ಐರಾಳಿಗೆ ಕಿವಿ ಚುಚ್ಚಿಸಿದ್ದೇವೆ. ಪೋಷಕರಾಗಿ ಈ ಸಂದರ್ಭಕ್ಕೆ ಸಾಕ್ಷಿಯಾಗಲು ನಿಜಕ್ಕೂ ಕಷ್ಟವಾಗುತ್ತದೆ. ಅವಳು ತುಂಬಾ ಅಳುತ್ತಿದ್ದಾಗ ನಮ್ಮ ಹೃದಯ ಒಡೆದು ಹೋದ ಅನುಭವವಾಯಿತು. ನಾನು ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಕಣ್ಣಲ್ಲಿ ನೀರು ನೋಡಿದೆ. ಆಗ ಈ ಸಂಬಂಧ ಎಷ್ಟು ಸುಂದರ ಎಂಬುದು ತಿಳಿಯಿತು. ಸದ್ಯ ಅಪ್ಪ-ಮಗಳು ಕ್ಷೇಮವಾಗಿದ್ದಾರೆ ಎಂದು ರಾಧಿಕಾ ಪೋಸ್ಟ್ ಮಾಡಿದ್ದಾರೆ. ಸದ್ಯ ತಮ್ಮ ಮುದ್ದಿನ ಮಗಳ ಜೊತೆ ಆಟವಾಡುತ್ತಾ ಖುಷಿಯಲ್ಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ರಾಕಿಂಗ್ ಜೋಡಿ ಖುಷಿಯಲ್ಲಿದ್ದಾರೆ.

Edited By

Manjula M

Reported By

Manjula M

Comments