ಸ್ಟಾರ್ ನಟರ ಹೆಸರಿನಲ್ಲಿ ಕಿತ್ತಾಡುವ ಅಭಿಮಾನಿಗಳಿಗೆ ನವರಸನಾಯಕ ಏನ್ ಹೇಳುದ್ರು ಗೊತ್ತಾ..?

27 Aug 2019 10:07 AM | Entertainment
462 Report

ಇತ್ತಿಚಿಗೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಎಂಬ ಪದ ಜೋರಾಗಿಯೇ ಕೇಳಿ ಬರುತ್ತಿದೆ. ಅದರಲ್ಲೂ ದರ್ಶನ್ ಮತ್ತು ಸುದೀಪ್ ನಡುವೆ ಈ ರೀತಿಯದ್ದೊಂದು ಸಮರ ಇದೆ ಎನ್ನುವುದು ಗಾಂಧಿನಗರ ಮಂದಿಯ ಮಾತು. ಕೇವಲ ಗಾಂಧಿನಗರದ ಮಂದಿಯ ಮಾತಲ್ಲ.. ಅಭಿಮಾನಿಗಳ ಮಾತು ಕೂಡ ಹೌದು…  ಇತ್ತೀಚೆಗೆ ಕನ್ನಡದಲ್ಲಿ ಸ್ಟಾರ್ ಗಿರಿ ಹೆಚ್ಚಾಗುತ್ತಿದೆ. ಸ್ಟಾರ್ ನಟರ ನಡುವೆ ವೈಮನಸ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಹೆಸರಿನಲ್ಲಿ ಕೆಲವು ಅಭಿಮಾನಿಗಳಂತೂ ಸೋಷಿಯಲ್ ಮೀಡಿಯಾಗಳ ಮೂಲಕ ವಾರ್ ನಡೆಸುತ್ತಿರುವುದು ಕಾಮನ್ ಆಗಿ ಬಿಟ್ಟಿದೆ..

ಇಂತಹವರಿಗೆ ನವರಸನಾಯಕ ಜಗ್ಗೇಶ್ ಎಚ್ಚರಿಕೆ ನೀಡಿದ್ದಾರೆ.. ನಿಮ್ಮ ಅಭಿಮಾನ ಪ್ರಶಂಸನೀಯ. ಆದರೆ ಅವರ ಹೆಸರಿನಲ್ಲಿ ಪರಸ್ಪರ ತೆಗಳುವ ಕೆಲಸ ಮಾಡಬೇಡಿ ಎಂದು ಜಗ್ಗೇಶ್ ಮನವಿ ಮಾಡಿದ್ದಾರೆ.. ಯಾವುದೇ ಕಾರಣಕ್ಕೂ ತೆಗಳುವಿಕೆ ಬೇಡ. ಎಲ್ಲಾ ನಟರು ತಮ್ಮ ಶಕ್ಯಾನುಸಾರ ಕನ್ನಡ ತೇರನ್ನು ಎಳೆಯುತ್ತಿದ್ದಾರೆ. ಕನ್ನಡಿಗನ ನಿಜವಾದ ಧರ್ಮ ಕನ್ನಡ ಸೇವಕನ ಭುಜ ತಟ್ಟುವುದು. ಕನ್ನಡಿಗನೇ ಕನ್ನಡಿಗನನ್ನು ತೆಗಳಿದರೆ ನಮ್ಮ ನಾವೇ ಅವಮಾನಿಸಿದಂತೆ' ಎಂದು ಜಗ್ಗೇಶ್ ಕಿವಿ ಮಾತು ಹೇಳಿದ್ದಾರೆ.  ಒಟ್ಟಿನಲ್ಲಿ ನಟರು ಸುಮ್ಮನಿದ್ದರೂ ಕೂಡ ಅಭಿಮಾನಿಗಳೂ ಸುಮ್ಮನಿರುತ್ತಿಲ್ಲ.. ಅಭಿಮಾನಿಗಳು ಹೀಗೆ ಮಾಡುವುದರಿಂದ ಕೆಲವೊಂದು ವಿಷಯಗಳು ಅತಿರೇಕಕ್ಕೆ ಹೋಗುತ್ತವೆ ಎನ್ನಬಹುದು.

Edited By

Manjula M

Reported By

Manjula M

Comments