ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ: ರಶ್ಮಿಕಾ ಮಂದಣ್ಣ..

ಸದ್ಯ ಸ್ಯಾಂಡಲ್ವುಡ್ ನಿಂದ ಹಿಡಿದು ಪರಭಾಷೆಗಳಲ್ಲಿಯೂ ಕೂಡ ಮಿಂಚುತ್ತಿರುವ ನಟಿ ಎಂದರೆ ಅದು ಕರ್ನಾಟಕದ ಕ್ರಶ್ ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ.. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಅವಧಿಯಲ್ಲಿಯೇ ಹೆಚ್ಚು ಹೆಸರು ಮಾಡಿದರು.. ತೆಲುಗಿನ ಗೀತಾ ಗೋವಿಂದಂ ಸಿನಿಮಾ ಹಿಟ್ ಆದ ಮೇಲಂತೂ ರಶ್ಮಿಕಾ ಗೆ ಬೇಡಿಕೆ ಹೆಚ್ಚಾಯಿತು..ಆದರೆ ಸಾಕಷ್ಟು ಬಾರಿ ಕನ್ನಡಾಭಿಮಾನಿಗಳ ಕೋಪಕ್ಕೆ ರಶ್ಮಿಕಾ ತುತ್ತಾಗಿದ್ದರು.
ತೆಲುಗಿನ 'ಡಿಯರ್ ಕಾಮ್ರೆಡ್' ಚಿತ್ರದ ಪ್ರಮೋಶನ್ ವೇಳೆ ರಶ್ಮಿಕಾ ತಮಿಳಿನಲ್ಲಿ ಮಾಧ್ಯಮವೊಂದರಲ್ಲಿ, 'ನನಗೆ ಕನ್ನಡ ಬರುವುದಿಲ್ಲ. ಕನ್ನಡದಲ್ಲೂ ಡಬ್ ಮಾಡುವುದ್ದಕ್ಕೆ ತುಂಬಾ ಕಷ್ಟ ಆಗುತ್ತದೆ' ಎಂದು ತಿಳಿಸಿದ್ದರು. ಆಗಲೂ ಕೂಡ ಅಭಿಮಾನಿಗಳು ರಶ್ಮಿಕಾಗೆ ಬಾಯಿಗೆ ಬಂದಂತೆ ಬೈದ್ದಿದ್ದರು. ಈ ನಡುವೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳಿಗೆ ತಮ್ಮನ್ನು ಪ್ರಶ್ನೆ ಕೇಳುವಂತೆ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ರಶ್ಮಿಕಾ, 'ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಹಲವು ಅಭಿಮಾನಿಗಳು ರಶ್ಮಿಕಾ ಅವರಿಗೆ ನಟ ವಿಜಯ್ ದೇವರಕೊಂಡ ಜೊತೆಗಿನ ಸ್ನೇಹದ ಬಗ್ಗೆ ಪ್ರಶ್ನೆ ಮಾಡಿದ್ದರು., ಒಟ್ಟಿನಲ್ಲಿ ಕನ್ನಡಿಗರ ವಿರುದ್ದ ಮಾತನಾಡಿದ್ದ ನಟಿ ರಶ್ಮಿಕ ಮಂದಣ್ಣನವರು ತಮ್ಮ ಕನ್ನಡಾಭಿಮಾನವನ್ನು ಈ ರೀತಿ ವ್ಯಕ್ತ ಪಡಿಸಿದ್ದಾರೆ.
Comments