ರವಿ ಬೆಳಗೆರೆ ಮೇಲೆ ಗರಂ ಆದ ದುನಿಯಾ ವಿಜಯ್..!!

24 Aug 2019 3:57 PM | Entertainment
333 Report

 ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ರವಿ ಬೆಳಗರೆಯ ವಿಡಿಯೋವೊಂದು ಸಖತ್ ಸದ್ದು ಮಾಡುತ್ತಿದೆ.. ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದುನಿಯಾ ವಿಜಯ್ ಅವರ ವೈಯಕ್ತಿಕ ವಿಚಾರಗಳನ್ನು ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ.. ತಮ್ಮ ಹಾಗೂ ನಟ ದರ್ಶನ್ ಖಾಸಗಿ ಬದುಕಿನ ಬಗ್ಗೆ ಯೂ ಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಪತ್ರಕರ್ತ, ಲೇಖಕ ರವಿ ಬೆಳಗರೆ ವಿರುದ್ಧ ನಟ ದುನಿಯಾ ವಿಜಯ್ ಇದೀಗ ಕಿಡಿ ಕಾರಿದ್ದಾರೆ.

ರವಿಬೆಳಗರೆ ಮಾತನಾಡಿರುವ ವಿಚಾರದ ಬಗ್ಗೆ ವಿಜಯ್ ಗೆ ಪತ್ರಕರ್ತರು ಪ್ರಶ್ನೆ ಮಾಡಿದ್ದಾರೆ. ನಟ ದರ್ಶನ್ ಹೆಂಡತಿಗೆ ಹೊಡೆದ ವಿಚಾರ ಮತ್ತು ದುನಿಯಾ ವಿಜಯ್ ಇಬ್ಬರು ಹೆಂಡತಿಯರನ್ನು ಹೊಂದಿರುವ ವಿಚಾರದ ಕುರಿತಂತೆ ರವಿಬೆಳಗರೆ ಟೀಕೆ ಮಾಡಿದ್ದರು. ಈ ಬಗ್ಗೆ ಪರ್ತಕರ್ತರು ಕೇಳಿದಾಗ ದುನಿಯಾ ವಿಜಯ್ ರವಿಬೆಳಗರೆಗೆ ಇಬ್ಬರು ಹೆಂಡತಿಯರು, ನಾಲ್ಕು ಜನ ಮಕ್ಳು. ಅವನಿಗೆ ಪ್ರಜ್ಞೆ ಇಲ್ಲ ಒಮ್ಮೆ ಪುಲ್ವಾಮಾ ಅಂತಾನೆ, ಮತ್ತೊಮ್ಮೆ ಯಾರದು ಹೆಂಡ್ತಿ ಗಲಾಟೆ ಅಂತಾನೆ. ಅವನಿಗೇನಾದ್ರೂ ಪ್ರಾಬ್ಲಂ ಇದ್ಯಾ? ಅವನ ವಯಸ್ಸಿಗೊಂದು ಮರ್ಯಾದೆ ಇರಬೇಕಲ್ವಾ ? ತಿಂಗಳಲ್ಲಿ ಇಪ್ಪತ್ತು ದಿನ ಕುಡಿದು ಮಾನಸ ಆಸ್ಪತ್ರೆಯಲ್ಲಿ ಮಲಗಿರುತ್ತಾನೆ. ಪ್ರಜ್ಞೆ ಬಂದಾಗ ವಿಜಯ್ ಹೆಂಡ್ತಿ, ದರ್ಶನ್ ಹೆಂಡ್ತಿ ಅಂತ ಬರೀತಾನೆ. ಅವನ ಹೆಂಡ್ತಿ ಅವನಿಗೆ ಕಾಣಲ್ವಾ? ಮೊದಲು ಅವನು ಸರಿ ಇರಬೇಕು. ಮತ್ತೆ ಇನ್ನೊಬ್ಬರ ಬಗ್ಗೆ ಮಾತನಾಡಬೇಕು. ಅವನಿಗೆ ಇದೇ ಲಾಸ್ಟ್ ವಾರ್ನಿಂಗ್' ಎಂದು ವಿಜಯ್ ರವಿ ಬೆಳಗರೆ ಮೇಲೆ ಗರಂ ಆಗಿದ್ದಾರೆ.. ಕಂಡವರ ಬಗ್ಗೆ ಮಾತನಾಡುವ ಮೊದಲು ತನ್ನ ಸಂಸಾರವನ್ನು ಸರಿ ಮಾಡಿಕೊಳ್ಳಲ್ಲಿ ಎಂದು ಕಿಡಿಕಾರಿದ್ದಾರೆ.  

Edited By

Manjula M

Reported By

Manjula M

Comments