'ಜಕ್ತಿ' ಎನ್ನುವ ವಿಭಿನ್ನ ಕಿರುಚಿತ್ರದ ಟ್ರೈಲರ್ ರಿಲೀಸ್..!!

24 Aug 2019 1:34 PM | Entertainment
462 Report

ಇತ್ತಿಚಿಗೆ ಚಂದನವನದಲ್ಲಿ ವಿಭಿನ್ನ ರೀತಿಯ ಪ್ರಯೋಗತ್ಮಕ ಸಿನಿಮಾಗಳು ಬರುತ್ತಿವೆ.. ನಡುವೆ ಕಿರುಚಿತ್ರಗಳೂ ಕೂಡ ಕಡಿಮೆ ಏನು ಇಲ್ಲ.. ಸಿನಿಮಾ ಕ್ರೇಜ್ ಇರುವವರು, ಬಣ್ಣದ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂದು ಕೊಂಡಿರುವವರು ಶಾರ್ಟ್ ಸಿನಿಮಾದ ಮೂಲಕ ಎಂಟ್ರಿ ಕೊಡೋದು ಕಾಮನ್.. ದೊಡ್ಡ ಸಿನಿಮಾಗಳಿಗಿಂತ ಕಿರುಚಿತ್ರಗಳಲ್ಲಿ ಏನಾದರೊಂದು ಸಂದೇಶ ಇದ್ದೆ ಇರುತ್ತದೆ.

ಈಗಾಗಲೇ ಸಾಕಷ್ಟು ಕಿರು ಚಿತ್ರಗಳು ಬಿಡುಗಡೆಯಾಗಿ ಯಶಸ್ಸನ್ನು ಕಂಡಿವೆ.. ಇದೀಗ ಸ್ನೇಹಿತ ಸ್ನೇಹಿತೆಯರೆಲ್ಲಾ ಸೇರಿ  ಹೊಸ ಕಿರುಚಿತ್ರ ಮಾಡಿದ್ದಾರೆ.. ಎಸ್… ಜಕ್ತಿ ಎನ್ನುವ ಕಿರು ಚಿತ್ರದ  ಟ್ರೈಲರ್  ಬಿಡುಗಡೆಯಾಗಿದೆ.. ಭುವನ್ ಬೋಪನ್ನ ಈ ಕಿರುಚಿತ್ರದ ಕಥೆ, ಸ್ಕ್ರೀನ್ ಪ್ಲೇ, ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿದು ಎನ್ ರಾಜು  ಸಹಾಯಕ ನಿರ್ದೇಶಕರಾಗಿದ್ದಾರೆ.  ಅನಿಲ್ ಕುಮಾರ್ ಹಾಗೂ ರಘು ಕುಮಾರ್ ಗೌಡ ಅವರ ಕ್ಯಾಮರ ಕೈ ಚಳಕ ಈ ಚಿತ್ರಕ್ಕಿದೆ. ಪ್ರವೀಣ್ ಕಾಲ್ , ಭುವನ್ ಸತ್ಯ ಲಲಿತ್ ಗೌಡ ರ ಸಂಕಲನ ಈ ಚಿತ್ರಕ್ಕಿದೆ.. ವರ್ಮಾ ಬ್ರದರ್ಸ್ ಅವರ ಸಂಗೀತ ಈ ಚಿತ್ರಕ್ಕಿದೆ. ಹೊಸಬರು ಸೇರಿ ಮಾಡಿರುವ ಈ ಕಿರುಚಿತ್ರ ವಿಭಿನ್ನವಾಗಿದೆ ಎನ್ನಬಹುದು..

Edited By

Manjula M

Reported By

Manjula M

Comments