ಮೀಟೂ ನಾಯಕಿ ಶ್ರುತಿ ಹರಿಹರನ್‍ಗೆ ಎದುರಾಯ್ತು ಸಂಕಷ್ಟ..!!
ಕೆಲ ತಿಂಗಳುಗಳ ಹಿಂದೆ ಚಂದನವನದಲ್ಲಿ ಸದ್ದು ಮಾಡಿದ್ದ ಮೀಟೂ ಆರೋಪ ಸದ್ಯ ತಣ್ಣಗೆ ಆಗಿದೆ.. ಅದರಲ್ಲಿ ಹೆಚ್ಚು ಸದ್ದು ಮಾಡಿ ಸುದ್ದಿಯಾದ ನಟಿ ಎಂದರೆ ಅದು ಶೃತಿ ಹರಿಹರನ್.. ಶೃತಿ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪವನ್ನು ಮಾಡಿದ್ದರು.. ವಿಸ್ಮಯ ಸಿನಿಮಾ ಚಿತ್ರಿಕರಣದ ವೇಳೆ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಶೃತಿ ಆರೋಪವನ್ನು ಮಾಡಿದ್ದರು.
ನಟ ಅರ್ಜುನ್ ಸರ್ಜಾ ಪರವಾಗಿ ನಟ ದೃವ ಸರ್ಜಾ ಅವರು ನಟಿ ಶ್ರುತಿ ಹರಿಹರನ್ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ರದ್ದು ಪಡಿಸಲು ನ್ಯಾಯಾಲಯ ನಿರಾಕರಿಸಿದೆ. ಪರಿಣಾಮ ದೃವ ಸರ್ಜಾರ ಅರ್ಜಿ ಊರ್ಜಿತವಾಗಿದ್ದು, ಶ್ರುತಿ ಹರಿಹರನ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ತಮ್ಮ ಮೇಲೆ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದು ಪಡಿಸುವಂತೆ ಕೋರಿ ನಟಿ ಶ್ರುತಿ ಹರಿಹರನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್, ಶ್ರುತಿ ಹರಿಹರಿನ್ ಅವರ ಅರ್ಜಿಯನ್ನು ಇಂದು ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ದೃವ ಸರ್ಜಾ ಅವರು ಶ್ರುತಿ ಹರಿಹರನ್ ಅವರ ವಿರುದ್ಧ 5 ಕೋಟಿ ರೂ. ಪರಿಹಾರ ಕೋರಿ ಮೊಕದ್ದಮೆ ದಾಖಲಿಸಿದ್ದರು. ಶೃತಿ ಹರಿಹರನ್ ಈಗ ಯಾವ ರೀತಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.. ಇದೀಗ ಮೀಟೂ ಆರೋಪ ಸ್ವಲ್ಪ ಮಟ್ಟಿಗೆ ತಣ್ಣಗೆ ಆಗಿದೆ.. ಚಂದನವನದಲ್ಲಿ ಈ ಮೀಟೂ ಒಂದು ರೀತಿಯ ಸಂಚಲವನ್ನೆ ಉಂಟು ಮಾಡಿತ್ತು..
Comments