ಮತ್ತೆ ಸ್ಟಾರ್ ವಾರ್…!! ದಚ್ಚು ಕಿಚ್ಚನ ನಡುವೆ ಮುಂದುವರೆದ ಜಟಾಪಟಿ..!!!

22 Aug 2019 5:45 PM | Entertainment
429 Report

ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ವಾರ್ ನಡೆಯುತ್ತಲೆ ಇದೆ ಎಂದು ಗಾಂಧಿನಗರದ ಮಂದಿಯ ಜೊತೆಗೆ ಅಭಿಮಾನಿಗಳು ಕೂಡ ಮಾತನಾಡಿಕೊಳ್ಳುತ್ತಲೆ ಇದ್ದಾರೆ.. ಅದರಲ್ಲೂ ಸ್ಯಾಂಡಲ್ ವುಡ್ ನ ಕಿಚ್ಚ ಮತ್ತು  ದಚ್ಚು ನಡುವೆ ಈ ಸ್ಟಾರ್ ವಾರ್ ಯಾಕೋ ಮುಂದುವರೆದ ಆಗಿದೆ…ಒಂದು ಕಾಲದಲ್ಲಿ ದಚ್ಚು ಮತ್ತು ಕಿಚ್ಚ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಈಗ ಹೇಳಿಕೊಳ್ಳುವಂತಹ ಸ್ನೇಹ ಅವರಿಬ್ಬರ ಮಧ್ಯೆ ಇಲ್ಲ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದನ್ನು ನೋಡಿದ ದರ್ಶನ್‌ ಇನ್ಮುಂದೆ ನಾನು ಸುದೀಪ್‌ ಸ್ನೇಹಿತನಲ್ಲ ಅಂತ ಟ್ವಿಟ್ ಮಾಡಿದ್ದರು.

ಆದರೆ ಕೆಲವು ತಿಂಗಳ ಹಿಂದೆ ಕಿಚ್ಚ ಸುದೀಪ್ ತಮ್ಮ ಹಿಂದೆ ಇದ್ದ ಗೆಳತನದ ನೆನಪಿನ ಕಾಣಿಕೆಯಾಗಿ ಮನೆಯಲ್ಲಿ ದರ್ಶನ್ ಜತೆಗಿನ ಫೋಟೋಗಳನ್ನು ಈಗಲೂ ಇಟ್ಟುಕೊಂಡಿರುವುದಾಗಿ ಹೇಳಿಕೊಂಡಿದ್ದರು..  ಇದೆಲ್ಲದರ ನಡುವೆ ಮೊನ್ನೆ ಮೊನ್ನೆಯಷ್ಟೆ ಸುದ್ದಿಗೋಷ್ಠಿಯಲ್ಲಿ ಸುದೀಪ್ ಸ್ನೇಹದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ವಿವಾದತ್ಮಕ ಹೇಳಿಕೆ ನೀಡಿದ್ದರು. ಆದಾದ ಬಳಿಕ ಸುದೀಪ್‌ ಕೂಡ ಟ್ವಿಟರ್‌ನಲ್ಲಿ ಪರೋಕ್ಷವಾಗಿ ದರ್ಶನ್‌ಗೆ ತಿರುಗೇಟು ಕೊಟ್ಟಿದ್ದರು.ಇದೀಗ ಅದಕ್ಕೆಲ್ಲಾ ಪುಷ್ಟಿ ನೀಡುವಂತೆ ನಟ ದರ್ಶನ್‌ ಕೂಡ ಸುದೀಪ್‌ ಅವರ ಖಾತೆಯನ್ನು ಫಾಲೋ ಮಾಡುತ್ತಿದ್ದರು. ಆದರೆ, ಎರಡು ವರ್ಷಗಳ ಹಿಂದೆಯೇ ಸುದೀಪ್‌ ಅವರನ್ನು ಅನ್​ಫಾಲೋ ಮಾಡಿದ್ದರು. ಈಗ ದರ್ಶನ್‌ ತೂಗುದೀಪ ಅವರ ಟ್ವಿಟರ್‌ ಅಕೌಂಟ್‌ನ್ನು ನಟ ಸುದೀಪ್‌ ಅನ್‌ಫಾಲೋ ಮಾಡಿದ್ದಾರೆ.ಒಟ್ಟಿನಲ್ಲಿ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದರು. ಹೀಗೆ ಸ್ಟಾರ್ ವಾರ್ ನಡೆದರೆ ಅಭಿಮಾನಿಗಳ ಆಸೆಗೆ ಎಳ್ಳು ನೀರು ಬಿಟ್ಟಂಗೆ..

Edited By

Manjula M

Reported By

Manjula M

Comments