ಸ್ಯಾಂಡಲ್ವುಡ್ ಪದ್ಮಾವತಿಯ ಮದುವೆಯ ಬಗ್ಗೆ ಸ್ಪಷ್ಟನೆ ಕೊಟ್ಟ ತಾಯಿ ರಂಜಿತಾ..!!

22 Aug 2019 1:38 PM | Entertainment
500 Report

ಸ್ಯಾಂಡಲ್ವುಡ್ ಅಂಗಳದಲ್ಲಿ ಕೆಲ ದಿನಗಳಿಂದ ರಮ್ಯ ಅವರ ಮದುವೆಯ ಮಾತು ಕೇಳಿ ಬರುತ್ತಿತ್ತು.. ಬಹು ದಿನಗಳಿಂದಲೂ ಮೋಹಕ ತಾರೆ ರಮ್ಯಾ ಅವರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.. ಇದೀಗ ಅದಕ್ಕೆಲ್ಲಾ ರಮ್ಯ ತಾಯಿ ರಂಜಿತಾ ಸ್ಪಷ್ಟನೆಯನ್ನು ನೀಡಿದ್ದಾರೆ. ಮೋಹಕ ತಾರೆ ರಮ್ಯಾ ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆಗೆ ದುಬೈನಲ್ಲಿ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಸುಮಾರು ಏಳೆಂಟು ವರ್ಷಗಳಿಂದ ರಿಲೇಷನ್‍ಶಿಪ್‍ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್ ಅವರು ರಮ್ಯಾ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ಈ ಸುದ್ದಿಯನ್ನು ರಮ್ಯ ತಾಯಿ ರಂಜಿತಾ  ತಳ್ಳಿ ಹಾಕಿದ್ದಾರೆ.

ರಮ್ಯಾ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ಆಕೆ ವಿವಾಹದ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ರಮ್ಯಾಗೆ ಮದುವೆ ಮಾಡುವಾಗ ಎಲ್ಲರಿಗೂ ತಿಳಿಸಿ ಮದುವೆ ಮಾಡುತ್ತೇವೆ. ಕದ್ದು ಮುಚ್ಚಿ ಮದುವೆ ಮಾಡುವ ಅವಶ್ಯಕತೆ ಇಲ್ಲ. ಈ ರೀತಿ ಇಲ್ಲದ ವದಂತಿಗಳನ್ನು ಹಬ್ಬಿಸಬೇಡಿ ಎಂದು ರಂಜಿತಾ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಮಗಳು ಮತ್ತು ರಾಫೆಲ್ ಇಬ್ಬರು ಈಗಾಗಲೇ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಆದರೆ ಇಬ್ಬರ ನಡುವೆ ಸ್ನೇಹ ಇದೆ.ನನ್ನ ಮಗಳಿಗೆ ವಿದೇಶಕ್ಕೆ ಹೋಗಲು ಇಷ್ಟವಿಲ್ಲ. ಈ ಕಾರಣದಿಂದ ಇಬ್ಬರು ಬೇರೆಯಾದರು ಎಂದು ಬ್ರೇಕಪ್‍ಗೆ ಕಾರಣವನ್ನು ತಿಳಿಸಿದರು. ರಮ್ಯ ಮದುವೆ ಮಾಡುವಾಗ ಬಹಿರಂಗವಾಗಿಯೇ ಎಲ್ಲರಿಗೂ ತಿಳಿಸಿಯೇ ಮದುವೆ ಮಾಡುತ್ತೇನೆ ಎಂದಿದ್ದಾರೆ.. ಸದ್ಯ ಯಾರ ಕೈಗೂ ಸಿಗದ ರಮ್ಯ ಎಲ್ಲಿ ಏನು ಮಾಡುತ್ತಿದ್ದಾರೋ ಗೊತ್ತಿಲ್ಲ…

Edited By

Manjula M

Reported By

Manjula M

Comments