ಮಗಳ ಬಾಲ್ಯವನ್ನು ಪದೇ ಪದೇ ನೆನಪಿಸಿಕೊಳ್ಳಲು ರಾಕಿಂಗ್ ಜೋಡಿ ಮಾಡಿದ್ದೇನು ಗೊತ್ತಾ..?

22 Aug 2019 11:24 AM | Entertainment
337 Report

ಸ್ಯಾಂಡಲ್ ವುಡ್ ನ ಕ್ಯೂಟೆಸ್ಟ್ ಕಪಲ್ ಗಳಲ್ಲಿ ಒಬ್ಬರಾದ ರಾಕಿಂಗ್ ಜೊಡಿ ಸದ್ಯ ಮಗಳ ಜೊತೆ ಟೈಮ್ ಪಾಸ್ ಮಾಡುತ್ತಿದ್ದಾರೆ.ಇದೀಗ ಮುದ್ದು ಮಗಳು ಆರ್ಯಾ ಬಾಲ್ಯದ ಸವಿ ನೆನಪನ್ನು ಸದಾ ನೆನಪಿನಲ್ಲಿಡಲು ಈ ನೋಡಿ ಹೊಸ ಪ್ಲ್ಯಾನ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಐರಾಳ ಬಾಲ್ಯದ ಪ್ರತಿಯೊಂದು ಕ್ಷಣಗಳನ್ನೂ ಎಂಜಾಯ್ ಮಾಡುತ್ತಿದ್ದಾರೆ.  

ಇದೀಗ ತಮ್ಮ ಮುದ್ದು ಮಗುವಿನ ಪುಟಾಣಿ ಕೈಮತ್ತು ಕಾಲು ಗಳನ್ನು ಜೀವನ ಪರ್ಯಂತ ನೋಡಲು ಯಶ್ ದಂಪತಿ ಹೊಸ ಪ್ಲ್ಯಾನ್ ಮಾಡಿದ್ದಾರೆ.  ತಮ್ಮ ಮಗಳು ಆರ್ಯಾಳ ಪುಟಾಣಿ ಕಾಲು ಮತ್ತು ಕೈಗಳ ಪ್ರತಿಕೃತಿಯನ್ನು ಸಾವಯವ ಪದಾರ್ಥಗಳನ್ನು ಬಳಸಿ ಮೇಕಪ್ ಕಲಾವಿದ ಪ್ರಶಾಂತ್ ಬಳಿ ಕಲಾಕೃತಿಯೊಂದನ್ನು ಮಾಡಿಸಿಕೊಂಡಿದ್ದಾರೆ. ಇದನ್ನು ಫ್ರೇಮ್ ನೊಳಗೆ ಹಾಕಿ ಅದನ್ನು ಯಾವತ್ತಿಗೂ ನೆನಪಾಗಿ ಇಟ್ಟುಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ. ಈ ಕಲಾಕೃತಿಯನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಯಶ್ ದಂಪತಿ ಇದರ ಬಗ್ಗೆ ಖುಷಿಯಿಂದಲೇ ಮಾತನಾಡಿಕೊಂಡಿದ್ದಾರೆ. ಕಲಾಕೃತಿಯನ್ನು ಮಾಡಿಕೊಟ್ಟ ಪ್ರಶಾಂತ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಯಶ್ ದಂಪತಿ ಮತ್ತೊಬ್ಬ ಅಥಿತಿಯಾಗಿ ಕಾಯ್ತಾ ಇದ್ದಾರೆ.. ಚಂದನವನದ ಈ ಕ್ಯೂಟ್ ಕಪಲ್ ಯಾವಾಗಲೂ ಹೀಗೆ ಇರಲಿ ಅನ್ನೋದು ಅಭಿಮಾನಿಗಳ ಆಸೆ.

.

Edited By

Manjula M

Reported By

Manjula M

Comments