SIIMA Award ಬಗ್ಗೆ ಅಸಮಾಧಾನ ಹೊರಹಾಕಿದ ನಟ ಕಮ್ ನಿರ್ದೇಶಕ..!!

19 Aug 2019 11:36 AM | Entertainment
383 Report

ಕತಾರ್’ನಲ್ಲಿ ಆಗಸ್ಟ್ 15 ರಂದು ನಡೆದ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡಕ್ಕೆ ಸಾಕಷ್ಟು ಪ್ರಶಸ್ತಿ ಸಿಕ್ಕಿವೆ.. ಸ್ಯಾಂಡಲ್’ವುಡ್ ನಲ್ಲಿ ಕೆಜಿಎಫ್ ಸಿನಿಮಾಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ…   ಬಹುಕೋಟಿ ಸಿನಿಮಾವಾದ 'ಕೆಜಿಎಫ್' ಸಿನಿಮಾಗೆ 8 ಅವಾರ್ಡ್’ಗಳು ದೊರಕಿವೆ.3 ಅವಾರ್ಡ್‌ಗಳು 'ಅಯ್ಯೋಗ' ಚಿತ್ರಕ್ಕೆ, 3 ಟಗರು ಚಿತ್ರಕ್ಕೆ ಹಾಗೂ 1 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಪಾಲಾಗಿರು ವಿಷಯ ಈಗಾಗಲೇ ಎಲ್ಲರಿಗೂ ಕೂಡ ತಿಳಿದೆ ಇದೆ..

ಸದ್ಯ ಪ್ರಶಸ್ತಿ ಸಿಕ್ಕಿರುವ ಖುಷಿಯಲ್ಲಿ ಇರುವಾಗಲೇ ಮತ್ತೊಂದು ಗಲಾಟೆ ಪ್ರಾರಂಭವಾಗಿದೆ.. ದೇಶದಾದ್ಯಂತ ತೆರೆ ಕಂಡು ಯಶಸ್ಸು ಗಳಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಟಗರು' ಚಿತ್ರಕ್ಕೆ ಕೇವಲ 3 ಪ್ರಶಸ್ತಿ ಬಂದಿರುವುದಕ್ಕೆ ನಟ ಹಾಗೂ ನಿರ್ದೇಶಕ ರಘುರಾಮ್ ಸೈಮಾ ಅವಾರ್ಡ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. '#Award's ಪಡೆದುಕೊಳ್ಳೋದು ಸಂಸ್ಕಾರ. ಕೆಲವರ ಅವಶ್ಯಕತೆಗೆ ಮಿಕ್ಕವರ ಅನಿವಾರ್ಯತೆಗೆ ಪ್ರಶಸ್ತಿಗಳನ್ನು ಕೊಡೋದು ವ್ಯವಹಾರ. ವಿಶ್ವಾದ್ಯಂತ ಜನಪ್ರಿಯವಾಗಿರೋ ಟಗರು ಚಿತ್ರಕ್ಕೆ ,ಹಾಡಿಗೆ ಹಾಡುಗಾರನಿಗೆ, ಸಂಗೀತ ನಿರ್ದೇಶಕನಿಗೆ, ಚಿತ್ರಕಥೆಗೆ, ಗುರುತು ಗೌರವ ಸಿಗದೇ ಇರೋದು @siims ಅವರ ಪಕ್ಷಪಾತ ನಿರ್ಧಾರ. #Tagaru ಎಂದು ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ರಘುರಾಮ್ ಸೈಮಾ ಅವಾರ್ಡ್ ಬಗ್ಗೆ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಅಷ್ಟೆ ಅಲ್ಲದೆ ಪ್ರಶಸ್ತಿಗಳನ್ನು ಕೊಡುವುದು ಒಂದು ವ್ಯವಹಾರ ಎಂದಿದ್ದಾರೆ.

Edited By

Manjula M

Reported By

Manjula M

Comments