ವಿಜಯ್ ದೇವರಕೊಂಡ ಲೈಫ್ ಗೆ ಎಂಟ್ರಿ ಕೊಟ್ಟ ನ್ಯೂ ಗರ್ಲ್..!! ರಶ್ಮಿಕಾ ಅಲ್ಲ… ಮತ್ಯಾರು…?

19 Aug 2019 10:49 AM | Entertainment
534 Report

ಸದ್ಯ ವಿಜಯ್ ದೇವಕೊಂಡ ಹೆಸರು ಸಿನಿಮಾ ದುನಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.. ಆತ ಮಾಡಿದ ಸಿನಿಮಾಗಳೆಲ್ಲಾ ಸಿಕ್ಕಾಪಟ್ಟೆ ಫೇಮಸ್ ಆಗಿವೆ.. ವಿಜಯ್ ಜೊತೆಗೆ ಸೇರಿಕೊಂಡಿರುವ ಮತ್ತೊಂದು ಹೆಸರು ಎಂದರೆ ಅದು ನಮ್ಮ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರದು.. ಇವರಿಬ್ಬರು ಒಟ್ಟಾಗಿ ಸೇರಿ ಮಾಡಿರುವ ಸಿನಿಮಾ ಸಖತ್ ಸದ್ದು ಮಾಡಿತ್ತು.. ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ಇಬ್ಬರು ಸಿಕ್ಕಾಪಟ್ಟೆ ಮಿಂಚಿದ್ದರು.. ಇವರಿಬ್ಬರ ಲಿಫ್ ಲಾಕ್ ಸೀನ್ ಗಳು ಸಖತ್ ಸುದ್ದಿ ಮಾಡಿತ್ತು…

ರಶ್ಮಿಕಾ ರಕ್ಷಿತ್ ಜೊತೆ ಬ್ರೇಕಪ್ ಮಾಡಿಕೊಂಡ ಮೇಲೆ ವಿಜಯ್ ದೇವರಕೊಂಡ ಅವರನ್ನೇನಾದರೂ ಲವ್ ಮಾಡ್ತಿದ್ದಾರ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದಂತೂ ಸುಳ್ಳಲ್ಲ… ಎಸ್.. ಇದೀಗ ವಿಜಯ್ ದೇವರಕೊಂಡ ಹೆಸರಿನ ಜೊತೆ ಮತ್ತೊಂದು ಹೆಸರು ಕೇಳಿ ಬರುತ್ತಿದೆ. ಅದು ಬಾಲಿವುಡ್ ಸೂಪರ್ ಸ್ಟಾರ್ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಹೆಸರು…

ಹೌದು ಕಾರ್ಯಕ್ರಮದಲ್ಲಿ ನಿರೂಪಕ ಒಂದು ಪ್ರಶ್ನೆಯನ್ನ ಕೇಳಿದರು.. ನೀವು ಯರ ಜೊತೆ ಅಭಿನಯಿಸಲು ಇಷ್ಟ ಪಡುತ್ತಿರಾ ಎಂದು.. ಆಗ ಜಾಹ್ನವಿ ಕಪೂರ್ ವಿಜಯ್ ದೇವರಕೊಂಡ ಹೆಸರನ್ನು ತೆಗೆದುಕೊಂಡಿದ್ದರು… ಆ ಮಾತು ಇದೀಗ ನಿಜವಾಗುತ್ತದೆ ಎನ್ನಲಾಗುತ್ತಿದೆ.. ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾ ಜನಗಣಮನ.. ಈ ಸಿನಿಮಾ ಗೆ ಜಾಹ್ನವಿಯನ್ನು ನಾಯಕಿಯಾಗಿ ಮಾಡಬೇಕು ಎಂಬ ಚರ್ಚೆಯನ್ನು ಮಾಡುತ್ತಿದೆ.. ಜಾಹ್ನವಿಗೆ ವಿಜಯ್ ಮೇಲೆ ಕ್ರಶ್ ಇದ್ದರೂ ಇರಬಹುದು ಎಂಬುದು ಅವರ ಮಾತಿನಿಂದ ತಿಳಿಯುತ್ತಿದೆ.. ಒಟ್ಟಾರೆಯಾಗಿ ಇಷ್ಟು ದಿನ ರಶ್ಮಿಕಾ ಮತ್ತು ವಿಜಯ್ ಹೆಸರು ಹೆಚ್ಚಾಗಿ ಕೇಳಿ ಬರುತ್ತಿತ್ತು.. ಇದೀಗ ಜಾಹ್ನವಿ ಹೆಸರು ಕೇಳಿಬರುತ್ತಿದೆ.

Edited By

Manjula M

Reported By

Manjula M

Comments