ಅಗ್ನಿಸಾಕ್ಷಿಯ ಚಂದ್ರಿಕಾ ಮನೆಗೆ ಹೊಸ ಅಥಿತಿಯ ಆಗಮನ..!!
ಕೆಲ ವರ್ಷಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಧಾರವಾಹಿಗಳಲ್ಲಿ ಅಗ್ನಿಸಾಕ್ಷಿ ಕೂಡ ಒಂದು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿಗೆ ಪ್ರೇಕ್ಷಕ ವರ್ಗ ಹೆಚ್ಚಾಗಿಯೆ ಇದೆ.. ಈ ಧಾರವಾಹಿಯ ಪಾತ್ರಧಾರಿಗಳಲ್ಲಿ ಚಂದ್ರಿಕಾ ಕೊಂಚ ಹೆಚ್ಚೆ ಅಭಿಮಾನಿಗಳನ್ನ ಸಂಪಾದಿಸಿರಬಹುದು.. ಧಾರವಾಹಿಯ ಮೊದಲಿನಲ್ಲಿಯೇ ಚಂದ್ರಿಕಾ ಪಾತ್ರಧಾರಿ ಬದಲಾಗಿದ್ದರು.. ಮೊದಲು ಮಾಡಿದ ಚಂದ್ರಿಕಾ ಪಾತ್ರಧಾರಿಯು ಕೂಡ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದರು..
ಎಸ್..ನಂತರ ನಾನಾ ಕಾರಣಗಳಿಂದ ಧಾರವಾಹಿಯಿಂದ ಹೊರಬಂದಿದ್ದರು.. ಈ ಹಿಂದೆ ಚಂದ್ರಿಕಾ ಪಾತ್ರಧಾರಿಯಾಗಿ ರಾಜೇಶ್ವರಿ ಪಾರ್ಥಸಾರ್ಥಿ ಅವರು ಅಭಿನಯಿಸುತ್ತಿದ್ದರು. ಅವರು ಈ ಧಾರಾವಾಹಿಯಿಂದ ಹೊರಬಂದು ಕೆಲವು ವರ್ಷಗಳಾಗಿದ್ದು, ಇದೀಗ ಅವರು ಸಂಪೂರ್ಣ ಬದಲಾಗಿದ್ದಾರೆ. ರಾಜೇಶ್ವರಿ ಅವರು ಮದುವೆಯಾದ ಬಳಿಕ ಧಾರವಾಹಿಯಿಂದ ಹೊರಬಂದು ಪತಿ ಕಲ್ಯಾಣ್ ಕ್ರಿಶ್ ಅವರೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲಸಿದ್ದರು.. ಇದೀಗ ಈ ದಂಪತಿಗೆ ಹೆಣ್ಣು ಮಗುವಾಗಿದ್ದು, ಮಗುವಿಗೆ ಹವ್ಯಾ ಕೃಷ್ಣ ಎಂದು ನಾಮಕರಣವನ್ನೂ ಕೂಡ ಮಾಡಿದ್ದಾರೆ. ರಾಜೇಶ್ವರಿ ಅವರು ಮದುವೆಯಾದ ನಂತರ ಸಿನಿಮಾರಂಗದಿಂದ ದೂರ ಸರಿದಿದ್ದು, ಇದೀಗ ಆಸ್ಟ್ರೇಲಿಯಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜೇಶ್ವರಿ ಅವರ ವೇಷ ಭೂಷಣ ಕೂಡ ಸಂಪೂರ್ಣ ಬದಲಾಗಿದೆ.
Comments