ಖುಷ್ಬು ಆಯ್ತು…ಇದೀಗ ಈ ಸ್ಟಾರ್ ನಟಿಗೆ ದೇವಾಲಯ ಕಟ್ಬೇಕಂತೆ..!!

17 Aug 2019 10:34 AM | Entertainment
463 Report

ಸದ್ಯ ಟಾಪ್ ಹಿರೋಯಿನ್ಸ್ ಹೆಸರುಗಳಲ್ಲಿ ಕರ್ನಾಟಕದ ಕ್ರಶ್ ಸಾನ್ವಿ ಹೆಸರು ಕೇಳಿ ಬರುತ್ತದೆ… ಕನ್ನಡದಷ್ಟೆ ಅಲ್ಲದೆ ಪರಭಾಷೆಗಳಲ್ಲಿಯೂ ಮಿಂಚುತ್ತಿರುವ ರಶ್ಮಿಕಾ ಆಗಾಗ ಸದ್ದು ಮಾಡುತ್ತಾ ಸುದ್ದಿಯಾಗುತ್ತಿರುತ್ತಾರೆ.. ಪ್ರತಿ ಬಾರಿಯೂ ಯಶಸ್ಸು ಕಾಣುತ್ತಿರುವ ರಶ್ಮಿಕಾ ಬಗ್ಗೆ ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಇತ್ತಿಚಿಗೆ ವಿಜಯ್ ದೇವರಕೊಂಡ ಆಕೆಯ ಮೇಲೆ ಸಂದರ್ಶನದ ವೇಳೆ ಕಾಲಿಟಿದ್ದರು.. ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು..ಅದಷ್ಟೆ ಅಲ್ಲದೆ ಅಭಿಮಾನಿಗಳು ಕೂಡ ಇದನ್ನು ನೋಡಿ ಬೇಸರ ವ್ಯಕ್ತ ಪಡಿಸಿದ್ದರು..

ಮಾಧ್ಯಮವೊಂದರಲ್ಲಿ ‘ಡಿಯರ್ ಕಾಮ್ರೆಡ್’ ಚಿತ್ರದ ಸಂದರ್ಶನದ ವೇಳೆ ರಶ್ಮಿಕಾ ತನ್ನ ತಂದೆಯ ಮಾತುಗಳನ್ನು ಹೇಳುವ ಮೂಲಕ ಆಸೆಯನ್ನು ಹೊರಹಾಕಿದ್ದಾರೆ..  '90 ದಶಕದ ನಟಿಯರು ಸೂಪರ್. ನನ್ನ ತಂದೆ ಖುಷ್ಬುಗಾಗಿ ಅಭಿಮಾನಿಗಳು ದೇವಸ್ಥಾನ ಕಟ್ಟಿಸಿರುವುದರ ಬಗ್ಗೆ ನನಗೆ ಪದೇ ಪದೇ ಹೇಳುತ್ತಿದ್ದರು. ಹಾಗೆಯೇ ನನಗೂ ಸ್ಮರಣೀಯ ಪ್ರಾಜೆಕ್ಟ್‌ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರಬೇಕೆಂಬ ಆಸೆಯಿದೆ'ಎಂದು ತಿಳಿಸಿದ್ದಾರೆ.. ಈಗಾಗಲೇ ಸಿಕ್ಕಾಪಟ್ಟೆ ಹೆಸರು ಮಾಡಿರುವ ಹಾಗೂ ಹೆಸರು ಮಾಡುತ್ತಿರುವ ರಶ್ಮಿಕಾಗೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.. . ಹಾಗಾಗಿ ಅಭಿಮಾನಿಗಳು ರಶ್ಮಿಕಾ ಗೆ ದೇವಾಲಯ ನಿರ್ಮಾಣ ಮಾಡಿದ್ರೂ ಮಾಡಬಹುದು..ಒಟ್ಟಿನಲ್ಲಿ ಚಂದನವನದಿಂದ ಎಂಟ್ರಿ ಪಡೆದ ರಶ್ಮಿಕಾ ಸದ್ಯ ಬಹು ಬೇಡಿಕೆಯ ನಟಿರಾಗಿದ್ದಾರೆ..  

Edited By

Manjula M

Reported By

Manjula M

Comments