ಶೃತಿ ಹರಿಹರನ್ ಮನಗೆ ಬಂದ ಹೊಸ ಪುಟ್ಟ ಲಕ್ಷ್ಮಿ..!!
ಕೆಲತಿಂಗಳುಗಳ ಹಿಂದೆ ಮೀಟೂ ಅಭಿಯಾನ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡಿತ್ತು… ಆದರೆ ಆ ವಿಷಯದಿಂದ ಹೆಚ್ಚು ಸುದ್ದಿ ಆಗಿದ್ದು ಮಾತ್ರ ಶೃತಿ ಹರಿಹರನ್… ಶರತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪವನ್ನು ಮಾಡಿದ್ದರು.. ಆ ಸಮಯದಲ್ಲಿ ಶೃತಿ ಹರಿಹರನ್ ಗೆ ಮದುವೆಯಾಗಿದೆ ಎಂಬ ವಿಚಾರವು ಕೂಡ ಬೆಳಕಿಗೆ ಬಂದಿತ್ತು.. ಆಗಿನಿಂದಲೂ ಕೂಡ ಸಿನಿಮಾದಿಂದ ಸ್ವಲ್ಪ ದೂರವೇ ಉಳಿದಿರುವ ಶೃತಿ ಇದೀಗ ಸಂಭ್ರಮದಲ್ಲಿದ್ದಾರೆ..
ಎಸ್… ನಾತಿಚರಾಮಿ ಖ್ಯಾತಿಯ ಶೃತಿ ಹರಿಹರನ್ ಮನೆಯಲ್ಲಿ ಈ ಬಾರಿ ವರಮಹಾಲಕ್ಷ್ಮೀ ಹಬ್ಬದ ಡಬಲ್ ಸಂಭ್ರಮ. ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಯಲ್ಲಿ ಪುಟ್ಟ ಮಹಾಲಕ್ಷ್ಮೀ ಇದ್ದಾಳೆ. 14ದಿನಗಳ ಹಿಂದೆ ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಶೃತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅಮ್ಮ-ಮಗಳು ಇಬ್ಬರೂ ಆರಾಮಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಶೃತಿ ಹರಿಹರನ್ ಗೆ ಸುದಿನ. ಅವರ ಪಾಲಿಗೆ ಇನ್ನೂ ಒಂದು ಖುಷಿ ವಿಚಾರವೆಂದರೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದ್ದು ನಾತಿಚರಾಮಿ ಚಿತ್ರದ ಪಾತ್ರಕ್ಕೆ ವಿಶೇಷ ತೀರ್ಪುಗಾರರ ಪ್ರಶಸ್ತಿ ಲಭಿಸಿದೆ. ಸದ್ಯ ಶೃತಿ ಹರಿಹರನ್ ಫ್ಯಾಮಿಲಿಯ ಜೊತೆ ಖುಷಿಯಲ್ಲಿದ್ದಾರೆ..
Comments