ದರ್ಶನ್ ಯಾವ ಪಾತ್ರ ಮಾಡೋ ಆಸೆ ಬಿಚ್ಚಿಟ್ಟಿದ್ದಾರೆ ಗೊತ್ತಾ..?
ಚಂದನವನದ ಬಹು ನಿರೀಕ್ಷಿತ ಸಿನಿಮಾವಾದ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ.. ದರ್ಶನ್ ಅಭಿಮಾನಿಗಳು ದುರ್ಯೋಧನನ ನೋಡಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.. ಸಿನಿಮಾದಲ್ಲಿ ಮಾಡಿರುವ ಪಾತ್ರಧಾರಿಗಳೆಲ್ಲಾ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.. ಆ ಸಿನಿಮಾದಲ್ಲಿ ದುರ್ಯೋಧನನ ಪಾತ್ರವನ್ನು ದರ್ಶನ್ ಬಿಟ್ಟರೆ ಬೇರೆ ಯಾರಿಗೂ ಸೂಕ್ತವಾಗುತ್ತಿರಲಿಲ್ಲ ಎಂಬಂತೆ ಅಭಿನಯಿಸಿದ್ದಾರೆ.. ಇದೀಗ ದರ್ಶನ್ ಮತ್ತೊಂದು ಪಾತ್ರದ ಆಸೆಯನ್ನು ಬಿಚ್ಚಿಟ್ಟಿದ್ದಾರೆ..
ದರ್ಶನ್ ಅವರು `ನನ್ನ ಪ್ರಕಾರ’ ಚಿತ್ರದ ಟ್ರೈಲರ್ ಲಾಂಚ್‍ಗೆ ಹೋಗಿದ್ದ ಸಮಯದಲ್ಲಿ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಯಿತು. ಆಗ ದರ್ಶನ್ ಅವರು ಸಂಗೊಳ್ಳಿ ರಾಯಣ್ಣ, ದುರ್ಯೋಧನ ಪಾತ್ರ ಬಿಟ್ಟರೆ ನನಗೆ ಮದಕರಿ ನಾಯಕನ ಪಾತ್ರ ಮಾಡಬೇಕು ಎನ್ನುವ ಆಸೆ ಎದೆ ಎಂದು ಹೇಳುವ ಮೂಲಕ ತಮ್ಮ ಮನದ ಆಸೆಯನ್ನು ಹೇಳಿಕೊಂಡಿದ್ದಾರೆ… ನಂತರ 1970, 1980ರಲ್ಲಿ ದುರ್ಯೋಧನ ಪಾತ್ರ ನಿಭಾಯಿಸಲು ಯಾರು ಸೂಕ್ತ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ದರ್ಶನ್ ದುರ್ಯೋಧನ ಪಾತ್ರ ಮಾಡಲು ಸಾಕಷ್ಟು ದಿಗ್ಗಜರು ಇದ್ದಾರೆ. ಇನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸಿನಿಮಾ ಬೇಕು ಎಂದು ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ…. ನನ್ನ ಪ್ರಕಾರ ಸಿನಿಮಾ ಇದೇ ತಿಂಗಳು 23 ರಂದು ಬಿಡುಗಡೆಯಾಗಲಿದೆ..
Comments