ನಟಿ ರಶ್ಮಿಕಾ ಮಂದಣ್ಣ ಮೇಲೆ ಕಾಲಿಟ್ಟ ವಿಜಯ್ ದೇವರಕೊಂಡ..!!!

14 Aug 2019 10:44 AM | Entertainment
299 Report

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಾನ್ವಿಯಾಗಿ ಚಂದನವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಸದ್ಯ ಟಾಪ್ ಹಿರೋಯಿನ್ ಆಗಿ ಬಿಟ್ಟಿದ್ದಾರೆ.. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಗಳಿಯೂ ಕೂಡ ರಶ್ಮಿಕಾ ಮಂದಣ್ಣ ಸಖತ್ತಾಗಿಯೇ ಮಿಂಚುತ್ತಿದ್ದಾರೆ.. ಪರಭಾಷಾ ಚಿತ್ರರಂಗದ ಬಹುತೇಕ ಸ್ಟಾರ್ ನಟರುಗಳ ಜೊತೆ ಅಭಿನಯಿಸುತ್ತಿದ್ದಾರೆ.ಕೆಲ ದಿನಗಳ ಹಿಂದೆ ಕನ್ನಡ ಕಷ್ಟ ಎಂದು ಹೇಳಿ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದರು..

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಾಂಬೀನೇಷನ್ ನಲ್ಲಿ  ಹಿಟ್ ಚಿತ್ರಗಳನ್ನು ನೀಡಿದ್ದು, 'ಡಿಯರ್ ಕಾಮ್ರೇಡ್' ಚಿತ್ರ ಹಿಟ್ ಆದ ನಂತರ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ವಿಜಯ್ ದೇವರಕೊಂಡ, ರಶ್ಮಿಕಾ ಜೊತೆ ದುರಹಂಕಾರದ ವರ್ತನೆ ತೋರಿರುವುದು ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ ಸದ್ಯ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿರುವ ಈ ವಿಡಿಯೋದಲ್ಲಿ ನಿರೂಪಕಿ, 'ಗೀತ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಪಾತ್ರಗಳಲ್ಲಿನ ವ್ಯತ್ಯಾಸದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ ಅವರಿಗೆ ತಾತ ಎಂದಿದ್ದು, ಆಗ ತನ್ನ ಕಾಲನ್ನು ರಶ್ಮಿಕಾರ ಕಾಲ ಮೇಲಿಟ್ಟ ವಿಜಯ್ ದೇವರಕೊಂಡ ಕಾಲನ್ನು ಒತ್ತು ಎಂದು ತಿಳಿಸಿದ್ದಾರೆ.. ಈ ವಿಷಯಕ್ಕಾಗಿ ವಿಜಯ್ ದುರಹಂಕಾರದ ವರ್ತನೆಯನ್ನು ತೋರಿದ್ದಾರೆ.. ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.. ಈ ಜೋಡಿ ಪದೇ ಪದೇ ಸುದ್ದಿಯಾಗುತಯ್ತಲೆ ಇರುತ್ತಾರೆ. ಮುಂಬರುವ ದಿನಗಳಲ್ಲಿ ಮತ್ಯಾವ ವಿಷಯಕ್ಕೆ ಸುದ್ದಿಯಾಗುತ್ತಾರೋ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments