ಸೂಪರ್‌ಸ್ಟಾರ್ ರಜನಿಕಾಂತ್ ಬಳಿ ಸಹಾಯ ಕೇಳಿದ ವಿಜಯಲಕ್ಷ್ಮಿ..!!

13 Aug 2019 4:40 PM | Entertainment
440 Report

ಚಂದನವನದಲ್ಲಿ ಕೆಲ ತಿಂಗಳುಗಳ ಹಿಂದೆ ನಟಿ ವಿಜಯಲಕ್ಷ್ಮಿ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು.. ಆ ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆ ಎದುರಾಗಿ ಅವರು ಸಿನಿಮಾ ಇಂಡಸ್ಟ್ರಿಯ ಕೆಲವರನ್ನು ಸಹಾಯ ಕೇಳಿದ್ದರು.. ಕೆಲವರು ಅವರಿಗೆ ಸಹಾಯ ಕೂಡ ಮಾಡಿದ್ದರು. ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮಿ ತಾವು ಕಷ್ಟದಲ್ಲಿ ಇರುವುದಾಗಿ ಹೇಳಿ ಕಲಾವಿದರ ಬಳಿ ಸಹಾಯ ಕೇಳಿದ್ದರು. ಇದೀಗ ವಿಜಯಲಕ್ಷ್ಮಿ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಳಿ ಸಹಾಯ ಕೇಳಿದ್ದಾರೆ.

ನಟಿ ವಿಜಯಲಕ್ಷ್ಮಿ ಅವರು ವಿಡಿಯೋವೊಂದರಲ್ಲಿ, ನನ್ನ ತಾಯಿ ಹಾಗೂ ಸಹೋದರಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ರಜನಿಕಾಂತ್ ಅವರನ್ನು ಭೇಟಿ ಮಾಡಿ ನನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.  ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಸ್ಯಾಂಡಲ್‍ವುಡ್ ನಟರ ಬಳಿ ಸಹಾಯ ಕೇಳಿದ್ದರು. ಈ ವೇಳೆ ನಟ ಕಿಚ್ಚ ಸುದೀಪ್, ರವಿ ಪ್ರಕಾಶ್, ನಟಿ ಕಾರುಣ್ಯ ರಾಮ್ ಸೇರಿದಂತೆ ಹಲವು ಕಲಾವಿದರು ವಿಜಯಲಕ್ಷ್ಮಿ ಅವರ ಚಿಕಿತ್ಸೆಗೆ ಹಣ ನೀಡುವ ಮೂಲಕ ಸಹಾಯ ಮಾಡಿದ್ದರು. ವಿಡಿಯೋದಲ್ಲಿ ವಿಜಯಲಕ್ಷ್ಮಿ ಅವರು, “ರಜನಿಕಾಂತ್ ಅವರು ನನ್ನ ಕೊನೆಯ ಭರವಸೆ. ನನ್ನ ಮನವಿಯನ್ನು ರಜನಿಕಾಂತ್ ಬಳಿ ಹೇಳುವಂತೆ ಅಭಿಮಾನಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಹತಾಶೆಯಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅಲ್ಲದೆ ರಜನಿಕಾಂತ್ ನನ್ನ ಮನವಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಕೆಲ ನಾಯಕಿಯರು ಒಂದು ಕಾಲದಲ್ಲಿ ಸಿನಿಮಾ ಜಗತ್ತನ್ನೆ ಆಳಿದ್ದರು… ಇದೀಗ ಅವರಿಗೆ ಈ ರೀತಿಯ ಪರಿಸ್ಥಿತಿ ಬಂದಿರುವುದು ನಿಜಕ್ಕ ಶೋಚನೀಯ.. ಬಣ್ಣದ ಬದುಕು ಹೀಗೆ…

Edited By

Manjula M

Reported By

Manjula M

Comments