‘ಗಂಡಸ್ತನ ತೋರಿಸಲು ಕತ್ತಲಾಗಬೇಕಿಲ್ಲ’ ಎಂದು ಸುದೀಪ್ ಹೇಳಿದ್ದು ಯಾರಿಗೆ.?
ಚಂದನವನದಲ್ಲಿ ಸ್ಟಾರ್ ವಾರ್ ಎಂಬ ಮಾತು ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ.. ಈ ಪದ ಹೆಚ್ಚಾಗಿ ಕೇಳಿ ಬಂದಿದ್ದು ದರ್ಶನ್ ಮತ್ತು ಸುದೀಪ್ ನಡುವೆ.. ಇವರಿಬ್ಬರ ನಡುವೆ ವೈಮನಸ್ಸು ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ಅದಕ್ಕೆ ಸಾಕ್ಷಿ ಅವರಿಬ್ಬರ ಮಾತುಗಳು ಇದಕ್ಕೆ ಪುಷ್ಟಿ ನೀಡುವಂತೆ ಇದ್ದವು.. ಇದೀಗ ನಟ ಸುದೀಪ್ ಅವರ ಟ್ವೀಟ್ ಅನುಮಾನಗಳನ್ನು ಹುಟ್ಟಿಸಿವೆ..
ಸುದೀಪ್ ವಿವಾದತ್ಮಕ ಟ್ವಿಟ್‌ಗಳನ್ನು ಮಾಡುವುದು ತುಂಬಾ ರೇರ್.. ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸದಾ ಕಾಲ ಟಚ್‌ನಲ್ಲಿ ಇರುತ್ತಾರೆ. ಆದರೆ ಇಂತಹ ಸುದೀಪ್ ಈಗ ಒಂದು ವಿವಾದತ್ಮಕ ಟ್ವಿಟ್ ಮಾಡಿದ್ದು, ಈ ಟ್ವಿಟ್ ಹಿಂದೆ ಮುಂದೆ ಹೊಸದಾದ ಗಾಳಿ ಸುದ್ದಿ ಹರಿದಾಡುತ್ತಿದೆ. 'ಒಬ್ಬ ನಿಜವಾದ ಪುರುಷ ತಾನು ಗಂಡಸು ಎಂದು ಪ್ರೂವ್ ಮಾಡಲು ಮದ್ಯಪಾನ ಮಾಡುವುದಿಲ್ಲ. ಹಾಗೇ ಕತ್ತಲಾಗಲಿ ಎಂದು ಕಾಯುವುದೂ ಇಲ್ಲ.' ಇದು ನಾನು ಎಲ್ಲೋ ಓದಿದ ಸುಂದರ ಸಾಲುಗಳು. ತುಂಬ ಅದ್ಭುತವಾದ ಅರ್ಥ ಕೊಡುತ್ತದೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು ಈ ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸುದೀಪ್ ಅವರು ಈ ಟ್ವಿಟ್ ಯಾರಿಗೆ ಮಾಡಿದ್ದಾರೆ ಎನ್ನುವುದು ಗಾಂಧಿನಗರದ ದೊಡ್ಡ ಮಾತಾಗಿದೆ.. ಈ ಟ್ವೀಟ್ ಗಾಂದಿನಗರದ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ.. ಸುದೀಪ್ ಈ ಮಾತನ್ನು ಯಾರಿಗೆ ಹೇಳಿದ್ದಾರೆ ಎಂದು ಎಲ್ಲರೂ ತಲೆ ಕೆಡಿಸಿಕೊಂಡಿದ್ದಾರೆ.
Comments