ಕಾಶ್ಮೀರಿ ಹುಡುಗಿಯನ್ನ ಮದುವೆಯಾಗ್ತೀನಿ ಎಂದ ನಟ..!!
ಸದ್ಯ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರಕ್ಕೆ ಸಾಕಷ್ಟು ಮಂದಿ ಖುಷಿ ಪಡುತ್ತಿದ್ದಾರೆ.. ಮೋದಿ ಸರ್ಕಾರವನ್ನು ಶ್ಲಾಘಿಸುತ್ತಿದ್ದಾರೆ. ಇಂದು ಜಮ್ಮು-ಕಾಶ್ಮೀರದಲ್ಲಿ ಹೊಸ ಬದಲಾವಣೆಯಾಗಿದೆ. ಇಷ್ಟು ವರ್ಷ ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 35ಎ ರದ್ದುಗೊಳಿಸಿರುವುದಾಗಿ ಸಚಿವ ಅಮಿತ್ ಶಾ ಹೇಳ್ತಿದ್ದಂತೆ ದೇಶದ ಅನೇಕರು ಸಂಭ್ರಮಿಸಿದ್ದಾರೆ.. ಆದರೆ ಮೋದಿ ಸರ್ಕಾರವನ್ನು ವಿರೋಧಿಸುವವರು ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದೆಲ್ಲದರ ನಡುವೆ ತಮಾಷೆಯ ವಿಚಾರ ಏನಪ್ಪಾ ಅಂದ್ರೆ ನಟನೊಬ್ಬ ನಾನು ಸುಂದರವಾದ ಕಾಶ್ಮೀರಿ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದಿದ್ದಾರೆ. ಹೌದು ಚಲನಚಿತ್ರ ವಿಮರ್ಶಕ ಹಾಗೂ ನಟ ಕಮಲ್ ರಶೀದ್ ಈ ಬಗ್ಗೆ ಮಾತನಾಡಿರುವುದು ಟ್ರೋಲ್ ಆಗಿದೆ. ಸುಂದರವಾದ ಕಾಶ್ಮೀರಿ ಹುಡುಗಿ ನನ್ನನ್ನು ಮದುವೆಯಾಗಲು ಸಿದ್ಧವಾದ್ರೆ ನಾನು ಅಲ್ಲಿ ದೊಡ್ಡ ಬಂಗಲೆಯನ್ನು ಖರೀದಿ ಮಾಡ್ತೇನೆ. ಭೂಮಿ ಮೇಲಿನ ಸ್ವರ್ಗದಲ್ಲಿ ಸುಂದರವಾದ ಜೀವನ ನಡೆಸೋಣ ಎಂದು ಟ್ವಿಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಕಮಲ್ ರಶೀದ್, ಮೋದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲು ನನಗೆ ಮೋದಿ ಇಷ್ಟವಾಗ್ತಿರಲಿಲ್ಲ. ಅವ್ರು ತಮ್ಮ ವಾದವನ್ನು ಪೂರ್ಣಗೊಳಿಸಿರಲಿಲ್ಲ. ಈಗ ಮಾತಿನಂತೆ ನಡೆದು 370 ನೇ ವಿಧಿಯನ್ನು ಕೊನೆಗೊಳಿಸಿದ್ದಾರೆ. ಇನ್ನೊಂದು ಪ್ರಮಾಣ, ರಾಮ ಮಂದಿರ ನಿರ್ಮಾಣ ಮಾಡಿದ್ರೆ ಇನ್ನಷ್ಟು ಅವ್ರನ್ನು ಪ್ರೀತಿ ಮಾಡ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಈ ನಟ ಕಾಶ್ಮೀರಿ ಹುಡುಗನನ್ನು ಮದುವೆಯಾಗಲು ಮೋದಿ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಂತೆ ಆಗಿದೆ.. ಈ ನಟನ ಟ್ವೀಟ್ ಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿದ್ದು ಕೆಲವರು ತಮಾಷೆಯಾಗಿ ಕಾಲನ್ನೂ ಕೂಡ ಎಳೆದಿದ್ದಾರೆ.
Comments