ಕೆಜಿಎಫ್ ವಿಲನ್​ಗೆ ಪರರಾಜ್ಯದಲ್ಲೂ ಅಭಿಮಾನಿಗಳು ಇದ್ದಾರಂತೆ..!!

05 Aug 2019 3:54 PM | Entertainment
513 Report

ಸದ್ಯ ಸಿನಿಮಾ ಜಗತ್ತಿನಲ್ಲಿ ಹೀರೊಗಳಿಗಿಂತ  ವಿಲನ್ ಗೆ ಹೆಚ್ಚು ಅಭಿಮಾನಿಗಳಿದ್ದಾರೆ..ಚಂದನವನದಲ್ಲಿ ಸದ್ಯ ವಿಲನ್ ಗಳಿಗೆ ಹೆಚ್ಚು ಬೇಡಿಕೆ ಇದೆ.. ಚಂದನವನಕ್ಕೆ ಬಿಗ್ ಬ್ರೇಕ್ ಕೊಟ್ಟ ಸಿನಿಮಾ ಎಂದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ..  ಈ ಸಿನಿಮಾದ ಮೂಲಕ ಯಶ್ ನ್ಯಾಷನಲ್ ಸ್ಟಾರ್ ಆಗಿ ಬಿಟ್ಟರು.. ಇದೇ ಸಿನಿಮಾದ ಮೂಲಕ ವಿಲನ್ ಆಗಿ ಗುರುತಿಸಿಕೊಂಡವರಲ್ಲಿ ವಶಿಷ್ಟ ಸಿಂಹ ಕೂಡ ಒಬ್ಬರು.

ಎಸ್..  ವಶಿಷ್ಟ ಚಂದನವನದಲ್ಲಿ ಗುರುತಿಸಿಕೊಂಡಸಿದ್ದಾರೆ.. ಅವರ ಧ್ವನಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ.. ಇಂಥ ವಿಭಿನ್ನ ಮ್ಯಾನರಿಸಂನ ವಿಲನ್​ ವಶಿಷ್ಠ ಸಿಂಹ​ನಿಗೆ ಇದೀಗ ಪರರಾಜ್ಯದಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರಂತೆ. ಆರಡಿಗೂ ಮೀರಿದ ಎತ್ತರ, ಖಡಕ್ ಮೈಕಟ್ಟು, ಖದರ್ ಧ್ವನಿ ವ್ಯಕ್ತಿಗೆ ಪರರಾಜ್ಯದಲ್ಲಿಯೂ ಕೂಡ ಫ್ಯಾನ್ಸ್ ಇದ್ದಾರೆ. ಕೆಲವು ದಿನಗಳ ಹಿಂದಷ್ಟೆ ನಾಗತಿಹಳ್ಳಿ  ಸಿನಿಮಾ ಶೂಟಿಂಗ್‌ಗೆ ಪಂಜಾಬ್ ನ ಅಮೃತ್‌ಸರ್‌ಗೆ ನಟ ವಶಿಷ್ಠ ಸಿಂಹ ಹೋಗಿದ್ದರಂತೆ..ಅಲ್ಲಿ  ವಶಿಷ್ಠ ಸಿಂಹ ಅವರನ್ನು  ನೋಡಿ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡಿದ್ದಾರೆ . ಇಷ್ಟು ಜನ ಯಾಕೆ ಬಂದರು ಎಂದು ಗಾಬರಿಯಾದ ವಶಿಷ್ಠ . ಆಮೇಲೆ ಗೊತ್ತಾಗಿದ್ದು ಅವರು ಕೆಜಿಎಫ್ ಸಿನಿಮಾ ಮತ್ತು ಟ್ರೇಲರ್ ನೋಡಿದವರು ಎಂದು ತಿಳಿಯಿತು.. ಸದ್ಯ ಸಿಂಹ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸಿನಿಮಾ ಕೆರಿಯರ್’ಗೆ ಆಲ್ ದಿ ಬೆಸ್ಟ್..

Edited By

Manjula M

Reported By

Manjula M

Comments