ಅನುಷ್ಕಾ ವಿಚಾರಕ್ಕೆ ಮತ್ತೆ ಟ್ರೋಲ್ ಆದ ಕರ್ನಾಟಕದ ಕರ್ಶ್..!!
ಚಂದನವನದ ನಟಿಮಣಿಯರು ಪರಭಾಷೆಗಳಲ್ಲಿ ಮಿಂಚುತ್ತಿರುವುದು ಕಾಮನ್ ವಿಷಯವಾಗಿ ಬಿಟ್ಟಿದೆ..ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಕಡಿಮೆ ಅವಧಿಯಲ್ಲಿಯೇ ಪರಭಾಷೆಯಲ್ಲಿ ಮಿಂಚಿ ಸೈ ಎನಿಸಿಕೊಂಡರು.. ಆದರೆ ಹೆಸರು ಮಾಡಿದ್ದು ಕನ್ನಡ ಸಿನಿಮಾದಲ್ಲಿ ಆದರೂ ನನಗೆ ಕನ್ನಡ ಸರಿಯಾಗಿ ಬರಲ್ಲ ಅಂತ ಹೇಳಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.. ರಶ್ಮಿಕಾ ಪದೆ ಪದೆ ಟ್ರೋಲ್ ಆಗುತ್ತಿದ್ದರು.. ಇದೀಗ ಮತ್ತೊಮ್ಮೆ ಅನುಷ್ಕಾ ವಿಚಾರಕ್ಕೆ ಕರ್ನಾಟಕದ ಕರ್ಶ್ ಸಾನ್ವಿ ಟ್ರೋಲ್ ಆಗಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ಕಾರಣಕ್ಕೆ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಟ್ರೋಲ್‌ಗೆ ಒಳಗಾಗಿದ್ದು, ಕನ್ನಡಿಗರು ಆಕೆಯ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಇದುವರೆಗೆ ಕನ್ನಡ ಸಿನಿಮಾದಲ್ಲಿ ನಟಿಸದಿದ್ದರೂ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ತಮ್ಮ ಕುಟುಂಬದ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, 'ಜನ್ಮದಿನದ ಶುಭಾಶಯಗಳು ಅಮ್ಮ' ಎಂದು ಕನ್ನಡದಲ್ಲೇ ಶುಭ ಹಾರೈಸಿದ್ದರು. ಆದರೆ ರಶ್ಮಿಕಾ ಕನ್ನಡ ಸಿನಿಮಾದಿಂದಲೇ ಚಿತ್ರರಂಗ ಪ್ರವೇಶಿಸಿ ಹೆಸರು ಪಡೆದರೂ ಒಂದೆರಡು ಪರಭಾಷಾ ಚಿತ್ರದಲ್ಲಿ ನಟಿಸುತ್ತಿದ್ದಂತೆ ಆ ಭಾಷೆಯಲ್ಲೇ ಮಾತಾಡಿ ಕನ್ನಡ ಕಷ್ಟ ಎಂದಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡ ಕನ್ನಡಿಗರು ಮತ್ತೆ ಆಕೆಯನ್ನು ಟ್ರೋಲ್ ಮಾಡಿದ್ದಾರೆ. ಒಟ್ಟಿನಲ್ಲಿ ನಮ್ಮ ಕನ್ನಡದವರೆ ಕನ್ನಡ ಕಷ್ಟ ಎಂದರೆ ಪರಭಾಷೆಯಿಂದ ಬಂದವರ ಕಥೆಯೇನು ಹೇಳಿ…ರಶ್ಮಿಕಾ ಪದೇ ಪದೇ ಅಭಿಮಾನಿಗಳ ಕೋಪಕ್ಕೆ ತುತ್ತಾಗುತ್ತಿದ್ದು ಕನ್ನಡ ಚಿತ್ರರಂಗದಿಂದ ರಶ್ಮಿಕಾ ಅವರನ್ನು ಬ್ಯಾನ್ ಮಾಡಿ ಎಂಬ ಮಾತುಗಳು ಕೂಡ ಕೇಳಿ ಬಂದವು..
Comments