ಈ ನಟಿಯ ಎದೆಯ ಮೇಲೆ ಸ್ಟಾರ್ ನಟನ ಟ್ಯಾಟು..!
ಸೆಲೆಬ್ರೆಟಿಗಳು ಸುದ್ದಿಯಾಗುವುದು ಕಾಮನ್.. ಒಂದಿಲ್ಲ ಒಂದು ವಿಷಯಕ್ಕಾಗಿ ಸದಾ ಸುದ್ದಿಯಲ್ಲಿ ಇರುತ್ತಾರೆ… ಸದ್ಯ ನಟಿಯೊಬ್ಬಳು ತನ್ನ ಎದೆಯ ಮೇಲೆ ಸ್ಟಾರ್ ಹೀರೋ ಹೆಸರನ್ನು ಅಚ್ಚೆ ಹಾಕಿಸಿಕೊಂಡಿದ್ದಾಳೆ… ಇದೀಗ ಆ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.. ಅಷ್ಟಕ್ಕೂ ಆ ಹೀರೊ ಯಾರು..? ಅಚ್ಚೆ ಹಾಕಿಸಿಕೊಂಡಿರುವ ಆ ನಟಿ ಯಾರು ಗೊತ್ತಾ..?
ಟಾಲಿವುಡ್ ನಟಿಯೊಬ್ಬಳು ತನ್ನ ಎದೆಯ ಭಾಗದಲ್ಲಿ ತನ್ನ ನೆಚ್ಚಿನ ಸ್ಟಾರ್ ನಟನೊಬ್ಬನ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಸಖತ್ ಸುದ್ದಿಯಾಗಿದ್ದಾರೆ. ಟಾಲಿವುಡ್ ನ ಕೆಲವು ಚಿತ್ರಗಳಲ್ಲಿ ನಟಿಸಿರುವ ನಟಿ ಆಶು ರೆಡ್ಡಿ ಸ್ಟಾರ್ ನಟ ಪವನ್ ಕಲ್ಯಾಣ್ ಹೆಸರನ್ನು ತನ್ನ ಎದೆಯ ಭಾಗದ ಪಕ್ಕದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿ ಬಿಟ್ಟಿದ್ದಾರೆ. .ಈ ನಟಿ ಸ್ವಲ್ಪ ನೋಡಲು ಸಮಂತಾರನ್ನೇ ಹೋಲುವ ಕಾರಣ ಈಕೆಯನ್ನು ಟಾಲಿವುಡ್ ಸಿನಿರಂಗದವರು ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ. ಆಶು ರೆಡ್ಡಿ ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿಯಾಗಿದ್ದರು.. . ಅದೇ ಕಾರಣಕ್ಕೆ ಪವನ್ ಹೆಸರನ್ನ ತನ್ನ ಎದೆಯ ಭಾಗದಲ್ಲಿ ಟ್ಯಾಟೂ ಹಾಕಿಕೊಂಡಿದ್ದಾರೆ.. ಇನ್ನೂ ಈಕೆ ಬಗ್ಗೆ ಇಷ್ಟೆಲ್ಲಾ ಸುದ್ದಿಯಾಗುತ್ತಿರಲು ಕಾರಣವೆಂದರೆ ಈಕೆ ಈ ಬಾರಿ ತೆಲುಗಿನ ಬಿಗ್ ಬಾಸ್ ಮನೆಗೆ ಆಶು ರೆಡ್ಡಿ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಈ ಹಳೆಯ ಫೋಟೊ ಇದೀಗಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಸದ್ದು ಮಾಡುತ್ತಿದೆ.
Comments