ಇನ್ಸ್ಟಾಗ್ರಾಮ್ ನಲ್ಲಿ ಈ ಮೂವರು ಸ್ಟಾರ್ ಗಳನ್ನೆ ಹಿಂದೆ ಹಾಕಿದ ರಾಕಿ ಬಾಯ್..!!

01 Aug 2019 10:04 AM | Entertainment
375 Report

ಸೋಷಿಯಲ್ ಮಿಡೀಯಾವನ್ನು ಬಳಸುವುದರಲ್ಲಿ ಸಾಮಾನ್ಯ ಜನರಷ್ಟೆ ಮುಂದಿಲ್ಲ… ದೊಡ್ಡ ದೊಡ್ಡ ಸೆಲಬ್ರೆಟಿಗಳು ಕೂಡ ಮುಂದಿದ್ದಾರೆ.. ಸ್ಯಾಂಡಲ್ ವುಡ್ ನ ಸ್ಟಾರ್ಗಳು ಕೂಡ ಸೋಷಿಯಲ್ ಮಿಡೀಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ.. ಸ್ಟಾರ್ಸ ಗಳಿಗೆ ಅಭಿಮಾನಿಗಳೇ ದೇವರಿದ್ದಂಗೆ… ಅಭಿಮಾನಿಗಳನ್ನು ಸಂಪಾದಿಸುವಲ್ಲಿ ನಮ್ಮ ಸ್ಯಾಂಡಲ್ ವುಡ್ ಸ್ಟಾರ್ಟ್ ಗಳು ಕೂಡ ಏನು ಹಿಂದೆ ಬಿದ್ದಿಲ್ಲ.. ಸ್ಯಾಂಡಲ್ ವುಡ್ ನ ಈ ಸ್ಟಾರ್ ಹೀರೋ ನ ಫಾಲೋವರ್ಸ್ ಎಷ್ಟಿದ್ದಾರೆ ಗೊತ್ತಾ..?

ಎಸ್.. ರಾಕಿಂಗ್ ಸ್ಟಾರ್ ಯಶ್ ಇನ್ಸ್ಟಾಗ್ರಾಮ್ ನಲ್ಲಿ ಕನ್ನಡದ ಸ್ಟಾರ್ ಗಳಾದ ದರ್ಶನ್, ಸುದೀಪ್, ಪುನೀತ್ ರನ್ನು ಹಿಂದೆ ಹಾಕಿದ್ದಾರೆ. ರಾಕಿಂಗ್ ಸ್ಟಾರ್  ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ಗಳಿದ್ದಾರೆ.. . ಒಂದು ಮಿಲಿಯನ್ ಗಡಿ ದಾಟುವ ಮೂಲಕ ಇನ್ಸ್ಟಾಗ್ರಾಮ್ ನಲ್ಲಿಯೂ ದಾಖಲೆ ಮಾಡಿದ್ದಾರೆ. 'ಕೆಜಿಎಫ್' ಸಿನಿಮಾದ ಸಮಯದಲ್ಲಿ ಇನ್ಸ್ಟಾಗ್ರಾಮ್ ಗೆ ಬಂದಿದ್ದ ಯಶ್ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ನಟ ದರ್ಶನ್ 261K, ಸುದೀಪ್ 447K ಹಾಗೂ ಪುನೀತ್ ರಾಜ್ ಕುಮಾರ್ 717K ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.  ಯಶ್ ಇನ್ಸ್ಟಾಗ್ರಾಮ್ ನಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರುತ್ತಾರೆ. ಒಟ್ಟಾರೆಯಾಗಿ ಸದ್ಯ ಎಲ್ಲರಿಗಿಂತ ರಾಕಿಂಗ್ ಸ್ಟಾರ್ ಯಶ್ ಹೆಚ್ಚು ಪಾಲೋವರ್ಸ್ ಗಳನ್ನು ಹೊಂದಿದ್ದಾರೆ… ಕೆಜಿಎಫ್ 2 ಬಿಡುಗಡೆಯಾದ ಮೇಲೆ ಪಾಲೋವರ್ಸ್ ಡಬ್ಬಲ್ ಆದ್ರೂ ಕೂಡ ಆಶ್ಚರ್ಯ ಪಡಬೇಕಿಲ್ಲ..   

Edited By

Manjula M

Reported By

Manjula M

Comments