ಬೇಸರದಲ್ಲಿ  ದರ್ಶನ್ ಫ್ಯಾನ್ಸ್..!! ಆಗಸ್ಟ್ 2 ಕ್ಕೆ ಸಿನಿಮಾ ಬಿಡುಗಡೆಯಾಗೋದು ಡೌಟ್..!!

22 Jul 2019 11:13 AM | Entertainment
540 Report

ಸದ್ಯ ಚಂದನವನದ ಬಹುನೀಕ್ಷಿತ ಸಿನಿಮಾಗಳಲ್ಲಿ ಡಿ ಬಾಸ್ ಅಭಿನಯದ ಕುರುಕ್ಷೇತ್ರ ಕೂಡ ಒಂದು.. ಪೈಲ್ವಾನ್ ಮತ್ತು ಕುರುಕ್ಷೇತ್ರ ಒಟ್ಟಿಗೆ ತೆರೆ ಮೇಲೆ ಬರುತ್ತದೆ ಎಂಬುದು ಗಾಂಧಿನಗರದ ಮಾತಾಗಿತ್ತು.. ಆದರೆ ಅಷ್ಟರಲ್ಲಿಯೇ ಕುರುಕ್ಷೇತ್ರ ಸಿನಿಮಾದ ರಿಲೀಸ್ ಡೇಟ್ ಅನ್ನು ಚಿತ್ರತಂಡ ರಿವೀಲ್ ಮಾಡಿತ್ತು.. ಸದ್ಯ ಸ್ಟಾರ್ ವಾರ್ ತಪ್ಪಿತ್ತು ಎಂಬ ಖುಷಿ ಅಭಿಮಾನಿಗಳಿಗೆ ಇತ್ತು.. ಇದೀಗ ಆಗಸ್ಟ್ 2 ಕ್ಕೆ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಎಂದು ತಿಳಿಸಿದ್ದರು.. ಇದರಿಂದ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು.. ಇದೀಗ ಸಿನಿಮಾ ಆಗಸ್ಟ್ 2 ಕ್ಕೆ ಬಿಡುಗಡೆಯಾಗುವುದು ಡೌಟ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ..  

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ  50ನೇ ಸಿನಿಮಾದ ರಿಲೀಸ್​ಗೆ ಕೌಂಟ್​ಡೌನ್ ಪ್ರಾರಂಭವಾಗಿದೆ. . ಆದರೆ ನಿಗಧಿ ಮಾಡಿರುವ ದಿನಾಂಕದಲ್ಲಿಯೇ ಸಿನಿಮಾ  ಬಿಡುಗಡೆ ಆಗುತ್ತೋ ಇಲ್ವೋ ಅನ್ನೋದೇ ದೊಡ್ಡ ಕನ್ಫ್ಯೂಷನ್ ಆಗಿ ಬಿಟ್ಟಿದೆ.  ಅತೃಪ್ತ ಶಾಸಕರ ಪಟ್ಟಿಯಲ್ಲಿ ಕೇಳಿ ಬರುತ್ತಿರುವ ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ, ದೋಸ್ತಿ  ಸರ್ಕಾರದ ಮೇಲೆ ಕೋಪಿಸಿಕೊಂಡು ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. . ಮೀಡಿಯಾ ಸೇರಿದಂತೆ ಪಕ್ಷದ ಹಿರಿಯ ನಾಯಕರ ಕೈಗೂ ಸಿಗದ ಹಾಗೆ ಕಾಣೆಯಾಗಿದ್ದಾರೆ. ಹೀಗೆ ಅವರ ರಾಜಕೀಯ ಜಂಜಾಟದಲ್ಲಿ ಬ್ಯುಸಿಯಾದರೆ, ಇಲ್ಲಿ ಕುರುಕ್ಷೇತ್ರ ಪ್ರಮೋಷನ್ಸ್ ಗತಿಯೇನು ಎಂಬುದೇ ಸದ್ಯದ ಪ್ರಶ್ನೆಯಾಗಿದೆ. ಅದಷ್ಟೇ ಅಲ್ಲ, ದಚ್ಚು ಕೂಡ ರಾಬರ್ಟ್​ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ನಿರ್ಮಾಪಕರೇ ಚಿತ್ರದ ಪ್ರಮೋಷನ್ಸ್ ಬಗ್ಗೆ ತಲೆಕೆಡಿಸಿಕೊಳ್ಳದಿರೋದು ಕಲಾವಿದರಿಗೂ ಗೊಂದಲವುಂಟು ಮಾಡಿದೆ. ಅಷ್ಟೇ ಅಲ್ಲ ದೇ ನಿಗಧಿ ಆಗಿರುವ ಡೇಟ್ ಗೆ ಸಿನಿಮಾ ಬಿಡುಗಡೆಯಾಗುತ್ತದೆಯ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments