ಪ್ರಿಯಾ ವಾರಿಯರ್  ಜೊತೆ  'ಮುತ್ತಿನ ಗಮ್ಮತ್ತು'..!! ಆತ ಯಾರು..?

20 Jul 2019 3:38 PM | Entertainment
641 Report

ರಾತ್ರೋ ರಾತ್ರಿ ಸುದ್ದಿಯಾದವರಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಕೂಡ ಒಬ್ಬರು..ರಾತ್ರೋ ರಾತ್ರಿ ನ್ಯಾಷನಲ್ ಸ್ಟಾರ್ ಆಗಿ ಬಿಟ್ಟರು.. ಕಣ್ಣಿನ ಹುಬ್ಬಿನ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು… ಅಷ್ಟೆ ಅಲ್ಲದೆ ಪಡ್ಡೆ ಹುಡುಗರ ನಿದ್ದೆ ಕದ್ದರು.. ಪ್ರಿಯಾ ಸಿನಿಮಾ ವಿಚಾರಕ್ಕಿಂತ  ಬೇರೆ ವಿಷಯಗಳಿಗೆ ಹೆಚ್ಚು ಸುದ್ದಿಯಾಗುತ್ತಾರೆ. ಕಣ್ಸನ್ನೆ ಮಾಡಿ ಇಡೀ ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸುವಂತೆ ಮಾಡಿತ್ತು.. ಇದೀಗ, ಬಾಲಿವುಡ್ ನಲ್ಲಿ ಸಿನಿಮಾ ಮಾಡಲು ಸಜ್ಜಾಗಿರುವ ಪ್ರಿಯಾ ವಾರಿಯರ್ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಫೇಮಸ್ ಸಿನಿಮಾಟೋಗ್ರಫರ್ ಸೀನು ಸಿದ್ಧಾರ್ಥ್ ಜೊತೆಗಿನ ರೋಮ್ಯಾಂಟಿಕ್ ವಿಡಿಯೋವೊಂದನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾ, ಒರು ಅದಾರ್ ಲವ್ ಸಿನಿಮಾದ ಚಿತ್ರೀಕರಣದ ಘಟನೆಯನ್ನ ನೆನಪಿಸಿಕೊಂಡಿದ್ದಾರೆ. ಆದರೆ ಈ ವಿಡಿಯೋ ನೋಡಿದವರು ಆರಂಭದಲ್ಲಿ ಅಚ್ಚರಿಯಾಗುತ್ತಿದ್ದಾರೆ. ಪೂರ್ತಿ ವಿಡಿಯೋ ನೋಡಿ ಏನು ಇಲ್ಲ, ಇದೆಲ್ಲ ಪ್ರಚಾರ ಅಷ್ಟೇ ಎಂದು ಕೆಲವರು ಹೇಳುತ್ತಿದ್ದಾರೆ.. ಸಿನಿಮಾಟೋಗ್ರಫರ್ ಸಿದ್ಧಾರ್ಥ್ ಅವರು ಪ್ರಿಯಾ ವಾರಿಯರ್ ತುಟಿಗೆ ಮುತ್ತಿಡಲು ಮುಂದಾಗುತ್ತಾರೆ. ಇನ್ನೇನು ಮುತ್ತಿಟ್ಟರು ಎನ್ನುವಷ್ಟರಲ್ಲಿ ಎಇನ್ನೊಂದು ಕೈಯಲ್ಲಿದ್ದ ಬಾಟಲ್ ತಗೊಂಡು ನೀರು ಕುಡಿಯುತ್ತಾರೆ. ಇದರಿಂದ ಪ್ರಿಯಾ ವಾರಿಯರ್ ಬೇಸರವಾದಂತೆ ಎಕ್ಸ್ ಪ್ರೆಶನ್ ಕೊಡ್ತಾರೆ. ಇದೆಲ್ಲಾ ಸಿನಿಮಾದ ಪ್ರಚಾರಕ್ಕಾಗಿ ಮಾಡುವ ಗಿಮಿಕ್ ಎಂದು ಕೆಲವರು ಹೇಳುತ್ತಾರೆ. ಆದರೂ ಪ್ರಿಯಾ ರಾತ್ರೋ ರಾತ್ರಿ ನ್ಯಾಷನಲ್ ಸ್ಟಾರ್ ಆಗಿಧ್ದೆ ಆಕೆಯ ಕಣ್ಣುಗಳಿಂದ.. ಸದ್ಯ ಕೆಲ ಸಿನಿಮಾಗಳಲ್ಲಿ ಪ್ರಿಯಾ ಬ್ಯುಸಿಯಾಗಿದ್ದಾರೆ.

 

Edited By

Manjula M

Reported By

Manjula M

Comments