ನಟಿಯ ಹಾಟ್ ವಿಡಿಯೋ ವೈರಲ್…!!! ನಟಿ ಹೇಳಿದ್ದೇನು..?

19 Jul 2019 5:42 PM | Entertainment
420 Report

ಇತ್ತಿಚಿಗೆ ಸಿನಿಮಾ ನಟಿ ಮಣಿಯರು ಸಿನಿಮಾಗಳಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಅದಾಯಿ ಸಿನಿಮಾದಲ್ಲಿ ಅಮಲಾ ಪೌಲ್ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದರು.. ಇದೀಗ ಅವರ ಮೇಲೆ ದೂರನ್ನು ಕೂಡ ದಾಖಲು ಮಾಡಿದ್ದಾರೆ. ಅದೇ ರೀತಿ ಇದೀಗ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ನಟಿಸಿದ ‘ದಿ ವೆಡ್ಡಿಂಗ್ ಗೆಸ್ಟ್’ ಚಿತ್ರದಲ್ಲಿ ಇರುವ ಬೋಲ್ಡ್ ಸೀನ್ ಲೀಕ್ ಆಗಿದೆ. ಬೋಲ್ಡ್ ಸೀನ್ ಲೀಕ್ ಆಗಿದ್ದಕ್ಕೆ ನಾವು ಸೈಕೋ ಸೊಸೈಟಿಯಲ್ಲಿ ಇದ್ದೇವೆ ಎಂದು ನಟಿ ರಾಧಿಕ ಆಪ್ಟೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

‘ಸ್ಲಂಡಾಗ್ ಮಿಲೇನಿಯರ್’ ಚಿತ್ರದ ಕಲಾವಿದ ದೇವ್ ಪಟೇಲ್ ಅವರ ಜೊತೆ ದಿ ವೆಡ್ಡಿಂಗ್ ಗೆಸ್ಟ್ ಸಿನಿಮಾದಲ್ಲಿ  ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಯಾಗುವ  ಮೊದಲೇ  ದೇವ್ ಹಾಗೂ ರಾಧಿಕಾ ಅವರ ಬೋಲ್ಡ್ ಸೀನ್ ವೈರಲ್ ಆಗಿದೆ.. ಇದರಿಂದ ರಾಧಿಕಾ ಆಪ್ಟೆ ಗರಂ ಆಗಿ ಜನರ ಮನಸ್ಥಿತಿ ವಿಷಯದ  ಬಗ್ಗೆ ಪ್ರಶ್ನೆ ಮಾಡಿದ್ದಾರೆ. ದಿ ವೆಡ್ಡಿಂಗ್ ಗೆಸ್ಟ್ ಸಿನಿಮಾದಲ್ಲಿನ ಬೋಲ್ಡ್ ಸೀನ್ ಲೀಕ್ ಆಗಿದ್ದಕ್ಕೆ ರಾಧಿಕಾ ಬೇಸರಗೊಂಡಿದ್ದಾರೆ. ಈ ವಿಷಯದ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ವೆಡ್ಡಿಂಗ್ ಗೆಸ್ಟ್ ಚಿತ್ರದಲ್ಲಿ ಹಲವು ಸುಂದರವಾದ ದೃಶ್ಯಗಳು ಇವೆ.  ಆದರೆ ಬೋಲ್ಡ್ ಸೀನ್ ಲೀಕ್ ಆಗಿದೆ. ಏಕೆಂದರೆ ಜನರ ಮನಸ್ಥಿತಿ ಸರಿಯಿಲ್ಲ. ಹೀಗೆ ಮಾಡುವುದರಿಂದ ಜನರ ಮನಸ್ಥಿತಿ ಹಾಗೂ ಎಂತಹ ಸೈಕೋ ಸೊಸೈಟಿಯಲ್ಲಿ ನಾವೆಲ್ಲ ಇದ್ದೇವೆ ಎಂಬುದನ್ನು ತೋರಿಸಿಕೊಡುತ್ತದೆ ಎಂದರು.. . ಲೀಕ್ ಆಗಿರುವ ದೃಶ್ಯದಲ್ಲಿ ದೇವ್ ಕೂಡ ನಟಿಸಿದ್ದಾರೆ. ಆದರೆ ಇಲ್ಲಿ ನನ್ನ ಹೆಸರು ಮಾತ್ರ ಕೇಳಿ ಬರುತ್ತಿದೆ ಎಂದರು.. ಒಟ್ಟಿನಲ್ಲಿ ನಟಿಮಣಿಯರ ಬೋಲ್ಡ್ ಪಾತ್ರಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸಿದಷ್ಟು ಮಾತ್ರವಲ್ಲದೆ ಸಾಕಷ್ಟು ಚರ್ಚೆಗೂ ಕೂಡ ಕೂಡ ಗುರಿಯಾಗುತ್ತಿದೆ.

Edited By

Manjula M

Reported By

Manjula M

Comments