ಬೆತ್ತಲಾಗಿದ್ದಕ್ಕೆ  ಸ್ಟಾರ್ ನಟಿಯ ವಿರುದ್ದ ದಾಖಲಾಯ್ತು ದೂರು..!!!

19 Jul 2019 3:07 PM | Entertainment
391 Report

ಸದ್ಯ ಅಮಲಾ ಪೌಲ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ…. ಅದು ಅದಾಯಿ ಸಿನಿಮಾದ ಟೀಸರ್ ಮೂಲಕ.. ಆ ಸಿನಿಮಾದ ಟೀಸರ್ ನಲ್ಲಿ ಅಮಲಾ ಬೆತ್ತಲೆಯಾಗಿ ಕಾಣಿಸಿಕೊಂಡಿರುವುದು.. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕರಾದ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಹೆಬ್ಬುಲಿ ಬೆಡಗಿ ನಟಿ ಅಮಲಾ ಪೌಲ್ ‘ಅದಾಯಿ’ ಚಿತ್ರದಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಅವರು ಬೆತ್ತಲಾಗಿ ನಟಿಸಿದ್ದಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ

ಎಸ್.. ಅದಾಯಿ ಚಿತ್ರದಲ್ಲಿ ಅಮಲಾ ಪೌಲ್ ನಗ್ನತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಹಾಗೂ ತಮಿಳಿನ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅನೈತು ಮಕ್ಕಲ್ ಕಚ್ಚಿ ಸ್ಥಾಪಕಿ ರಾಜೇಶ್ವರಿ ಪ್ರಿಯಾ ಅವರು ದೂರು ದಾಖಲು ಮಾಡಿದ್ದಾರೆ.. ಅದಾಯಿ ಚಿತ್ರದ ಪೋಸ್ಟರ್ ನಲ್ಲಿ ನಗ್ನ ಫೋಟೋ ಹಾಕುವ ಮೂಲಕ ಚಿತ್ರವನ್ನು ಪ್ರಮೋಟ್ ಮಾಡಲಾಗುತ್ತಿದೆ ಎಂದು ವಿರೋಧ ವ್ಯಕ್ತ ಪಡಿಸಿದ್ದಾರೆ.  ದೂರು ದಾಖಲಿಸಿ ಸುದ್ದಿಗಾರರ ಜೊತೆ ಮಾತನಾಡಿದ ರಾಜೇಶ್ವರಿ ಪ್ರಿಯಾ ಅವರು, ನಾನು ಡಿಜಿಪಿ ಅವರನ್ನು ಭೇಟಿ ಮಾಡಿ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮಕೈಗೊಳ್ಳಿ ಎಂದು ಬೇಡಿಕೆ ಇಟ್ಟಿದ್ದೇನೆ. ಚಿತ್ರದ ಪ್ರಮೋಶನ್‍ಗಾಗಿ ನಗ್ನ ಪೋಸ್ಟರ್ ಗಳನ್ನು ಬಳಸಲಾಗುತ್ತಿದೆ. ಇದರಿಂದ ಮಕ್ಕಳು ಪ್ರಭಾವಿತರಾಗುತ್ತಾರೆ ಎಂದು ಹೇಳಿದ್ದಾರೆ. ಇತ್ತಿಚಿಗಷ್ಟೆ ಸಹನಟಿಯ ಕಿಸ್ಸಿಂಗ್ ಸೀನ್ ಕೂಡ ಸಿಕ್ಕಾಪಟ್ಟೆ ಸುದ್ದಿಲ್ಲಿತ್ತು.. ಇದಕ್ಕೆ ಅಮಲ ಸ್ಪಷ್ಟನೆ ಕೊಟ್ಟಿದ್ದರು ಕಿಸ್ ಮಾಡ್ರೋದಲ್ಲಿ ತಪ್ಪೇನಿದೆ ಎಂದು ಪ್ರಶ್ನೆಯನ್ನು ಮಾಡಿದ್ದರು.

Edited By

Manjula M

Reported By

Manjula M

Comments