ಕಿಚ್ಚ ಸುದೀಪ್ ರ 'ಫೇವರೆಟ್' ನಟಿಯ ಗುಟ್ಟನ್ನ ಪ್ರಿಯಾನೇ ಹೇಳ್ಬಿಟ್ರಾ..!!

19 Jul 2019 12:07 PM | Entertainment
694 Report

ಚಂದನವನದ ಮೋಸ್ಟ್ ಹ್ಯಾಂಡ್ಸಮ್ ಹೀರೋಗಳಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು.. ತನ್ನ ಅಭಿನಯದಿಂದಲೇ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿಯೂ ಕೂಡ ಕಿಚ್ಚ ಸುದೀಪ್ ಮಿಂಚಿದ್ದಾರೆ.. ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಇತರೆ ಭಾಷೆಯ ಚಿತ್ರರಂಗದಲ್ಲೂ ಕೂಡ ಸಖತ್ ಫೇಮಸ್. ಜೊತೆಗೆ ಬಾಲಿವುಡ್ ನ ಹಲವು ನಾಯಕ ನಟರ ಜೊತೆ ಸುದೀಪ್ ಅವರಿಗೆ ಉತ್ತಮ ಬಾಂಧವ್ಯವಿದೆ ಎಂದು ಹೇಳಬಹುದು. ಚಂದನವನದ ಅಭಿಮಾನಿಗಳನ್ನು ಮಾತ್ರವಲ್ಲದೆ ಪರ ಭಾಷೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಸದ್ಯ ಕಿಚ್ಚ ಸುದೀಪ್, ಸಲ್ಮಾನ್ ಖಾನ್ ಅವರ 'ದಬಾಂಗ್ 3' ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಸ್ವಲ್ಪ ದಿನಗಳ ಹಿಂದೆ ಪ್ರಭುದೇವ ಅವರಿಂದ ಸಲ್ಮಾನ್ ಖಾನ್ ಹಾಗೂ ತಾವು ದೃಶ್ಯ ಕಲಿಯುತ್ತಿರುವ ವಿಡಿಯೋವನ್ನು ಎಲ್ಲರ ಜೊತೆ ಹಂಚಿಕೊಂಡಿದ್ದರು. ಇದೀಗ ನಟ ಅಜಯ್ ದೇವಗನ್ ಅವರೊಂದಿಗೆ ಇರುವ ಫೋಟೋವನ್ನು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಈ ಸಮಯದಲ್ಲಿ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್  ಕಿಚ್ಚ ಸುದೀಪ್ ಅವರ ಫೇವರೆಟ್ ನಟಿಯ ಹೆಸರನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಅಜಯ್ ದೇವಗನ್ ಜೊತೆಗಿರುವ ಸುದೀಪ್ ಫೋಟೋಗೆ ಕಮೆಂಟ್ ಮಾಡಿರುವ ಪ್ರಿಯಾ ಸುದೀಪ್, 'ನೀವು ಅಜಯ್ ದೇವಗನ್ ಅವರ ಪತ್ನಿಯನ್ನು ಭೇಟಿ ಮಾಡಿದ್ದರೆ ಮತ್ತಷ್ಟು ಸಂತಸ ಪಡುತ್ತಿದ್ದೀರಿ. ನೀವು ಕಾಜೋಲ್ ಅವರ ಅಭಿಮಾನಿ ಎಂಬುದು ನನಗೆ ಗೊತ್ತು' ಎಂದು ತಿಳಿಸಿದ್ದಾರೆ.. ಸಾಕಷ್ಟು ಅಭಿಮಾನಿಗಳಿಗೆ ಸ್ಟಾರ್ ನಟ ನಟಿಯರ ಫೇವರೆಟ್ ಯಾರು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿರುತ್ತದೆ. ಸದ್ಯ ಸುದೀಪ್ ಗೆ ಕಾಜಲ್ ಎಂದರೆ ಎಂಬುದು ಅಭಿಮಾನಿಗಳಿಗೆ ತಿಳಿದಂತಾಗಿದೆ.

Edited By

Manjula M

Reported By

Manjula M

Comments