ಇನ್ಮುಂದೆ ಲಿಪ್ ಲಾಕ್ ಸಿನಿಮಾ ಮಾಡಲ್ಲ ಎಂದ ವಿಜಯ್ ದೇವರಕೊಂಡ..!!!

18 Jul 2019 5:45 PM | Entertainment
327 Report

ಅಂದಹಾಗೆ … ಟಾಲಿವುಡ್ ನಟ ವಿಜಯ್ ದೇವರಕೊಂಡ ಹೆಚ್ಚು ಲಿಪ್ ಲಾಕ್ ನಿಂದಾನೇ ಸುದ್ದಿಯಾಗಿದ್ದಾರೆ.. ಗೀತಾ ಗೋವಿಂದಂ ಸಿನಿಮಾದಿಂದಾನೇ ಹೆಚ್ಚು ಸುದ್ದಿಯಾಗಿದ್ದಾರೆ.. ಅಷ್ಟೆ ಅಲ್ಲದೆ ಲಿಪ್‍ಲಾಕ್ ಅಂದರೆ ಏನು..? ಈ ಪದವೇ ನನಗಿಷ್ಟವಾಗಲಿಲ್ಲ ಎಂದು ಟಾಲಿವುಡ್ ನಟ ವಿಜಯ್ ದೇವರಕೊಂಡ  ಹೇಳಿ ಮತ್ತೆ ಸುದ್ದಿಯಾಗಿದ್ದಾರೆ. ‘ಡಿಯರ್ ಕಾಮ್ರೆಡ್’ ಚಿತ್ರತಂಡ ನಡೆಸಿ ಮಾತನಾಡಿದ ಅವರು, ಕಿಸ್ಸಿಂಗ್ ಒಂದು ಭಾವಾತ್ಮಕ ಅಂಶ. ಅದಕ್ಕೆ ಬೆಲೆ ಕೊಡಬೇಕು ಎಂದರು. ಇದೀಗ ಇನ್ನು ಮುಂದೆ  ಕಿಸ್ಸಿಂಗ್ ಸೀನ್ ಇರುವಂತಹ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ ಎಂದು ಮತ್ತೆ ಸುದ್ದಿಯಾಗಿದ್ದಾರೆ.

ಅರ್ಜುನ್ ರೆಡ್ಡಿ ಸಿನಿಮಾದ ನಂತರ ಜನರು ನನ್ನನ್ನು ನೋಡಿ ಭಯಬಿದ್ದರು. ಆ ಸಿನಿಮಾದಲ್ಲಿ ನನ್ನ ಪಾತ್ರ ಆಗಿತ್ತು. ನಿಜ ಜೀವನದಲ್ಲಿ ನಾನು ಸಿಗರೇಟ್ ಕೂಡ ಸೇದುವುದಿಲ್ಲ. ಪಾತ್ರಕ್ಕೆ ತಕ್ಕಂತೆ ನಾನು ನಟಿಸಿದ್ದೇನೆ. ಹೀಗಾಗಿ ಕಿಸ್ಸಿಂಗ್ ಸೀನ್ ಬಗ್ಗೆ ವಿವರಣೆ ನೀಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು. ಒಟ್ಟಾರೆಯಾಗಿ ಈ ಪದ ಕೇಳಿದರೆ ನನಗೆ ಕಿರಿ ಕಿರಿ ಅನಿಸುತ್ತದೆ ಎಂದಿದ್ದಾರೆ… ವಿಜಯ ದೇವರಕೊಂಡ ಇತ್ತೀಚಿಗಷ್ಟೆ ನಡೆದ ತಮಿಳಿನ ಒಂದು ಸಂದರ್ಶನದಲ್ಲಿ ಲಿಪ್ ಲಾಕ್ ದೃಶ್ಯಗಳ ಬಗ್ಗೆ ಮಾತನಾಡಿದ್ದಾರೆ. ''ನನ್ನ ಮುಂದಿನ ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯ ಇದೆ. ಆದರೆ, ಅದರ ನಂತರ ಲಿಪ್ ಲಾಕ್ ಸೀನ್ ಇರುವ ಯಾವ ಸಿನಿಮಾವನ್ನು ಮಾಡಲ್ಲ.'' ಎಂದು ತಮ್ಮ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. ಇನ್ನು ಮುಂದೆ ಆಕ್ಷನ್ ಸಿನಿಮಾಗಳಲ್ಲಿ ಅಭಿನಯಿಸುತ್ತೇನೆ ಎಂದಿದ್ದಾರೆ.

Edited By

Manjula M

Reported By

Manjula M

Comments