ಮಹಿಳೆಯನ್ನು ಕಿಸ್ ಮಾಡಿದ್ರೆ ತಪ್ಪೇನು ಎಂದ ಹೆಬ್ಬುಲಿ ನಾಯಕಿ..!

18 Jul 2019 5:02 PM | Entertainment
442 Report

ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ ‘ಅದಾಯಿ’ ಸಿನಿಮಾದ ಟೀಸರ್ ನಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಖ್ಯಾತ ನಿರ್ದೇಶಕರಾದ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಟೀಸರ್ ನಲ್ಲಿ ಹೀಗೆ ಬೆತ್ತಲಾಗಿ ಕಾಣಿಸಿಕೊಂಡಿದ್ದ ಅಮಲಾ ಪೌಲ್ ಮತ್ತೊಂದು ಟೀಸರ್ ನಲ್ಲಿ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.. ಸಹನಟಿ ವಿಜೆ ರಮ್ಯಾ ಅವರನ್ನು ಅಮಲಾ ಪೌಲ್ ಚುಂಬಿಸಿದ ದೃಶ್ಯಗಳಿದ್ದು ಇದು ಕೂಡ ಮೊದಲ ಟೀಸರ್ ನಂತೆಯೇ ಸಖತ್ ಸದ್ದು ಮಾಡಿತ್ತು.

ಬಹುಭಾಷಾ ನಟಿ ಅಮಲಾ ಪೌಲ್ ತಮ್ಮ ಮುಂಬರುವ ‘ಅದಾಯಿ’ ಚಿತ್ರದಲ್ಲಿ ವಿಜೆ ರಮ್ಯಾ ಜೊತೆ ಲಿಪ್‍ಲಾಕ್ ಸೀನ್‍ನಲ್ಲಿ ನಟಿಸಿದ್ದ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವು ಜನರು ಅವರನ್ನು ಟೀಕಿಸಲು ಪ್ರಾರಂಭ ಮಾಡಿದ್ದರು.. ಈ ವಿಷಯದ ಬಗ್ಗೆ ಇದೀಗ ಅಮಲಾ ಪೌಲ್ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಅಮಲಾ ಪೌಲ್ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು.  ಇದೇ ಸಮಯದಲ್ಲಿ ಅವರನ್ನು ಕಿಸ್ಸಿಂಗ್ ಸೀನ್ ಬಗ್ಗೆ ಪ್ರಶ್ನೆ ಮಾಡಲಾಯಿತು. ಆಗ ಅಮಲಾ ಮಹಿಳೆಯನ್ನು ಕಿಸ್ ಮಾಡಿದ್ದರೆ ಏನೂ ತಪ್ಪು? ಈ ದೃಶ್ಯ ಸಹಜ ಹೊರತು ಸ್ಕ್ರಿಪ್ಟ್ ಮಾಡಲಿಲ್ಲ. ಒಮ್ಮೆ ನೀವು ಕ್ಯಾರೆಕ್ಟರ್ ನಲ್ಲಿ ಇದ್ದರೆ, ನಿಮ್ಮ ಒಳಗಿರುವ ನಟಿಯ ಪ್ರತಿಭೆಯನ್ನು ಹೊರಹಾಕಬೇಕು ಎಂದರು. ನಂತರ ಸಿನಿಮಾದ ಬಗ್ಗೆ ಮಾತನಾಡಿದ ಅಮಲಾ, ಈ ಚಿತ್ರದಲ್ಲಿ ಲೈಂಗಿಕತೆ ಯಾವುದು ಇಲ್ಲ. ಚಿತ್ರದ ದೃಶ್ಯಗಳನ್ನು ಅರ್ಥ ಮಾಡಿಕೊಳ್ಳಲು ನೀವು ಅದಾಯ್ ಚಿತ್ರವನ್ನು ನೋಡಲೇಬೇಕು. ಮೊದಲಿನಲ್ಲಿ ಈ ದೃಶ್ಯ ಮಾಡುವುದು ಹೇಗೆ ಎಂದು ನನಗೆ ಗೊತ್ತಾಗುತ್ತಿರಲಿಲ್ಲ…ಆದರೆ ಈ ದೃಶ್ಯ ಮಾಡಿದ ನಂತರ ನನ್ನ ದೇಹ ಆರಾಮದಾಯಕವಾಗಿತ್ತು. ಅಲ್ಲದೆ ನಾನು ಜಗತ್ತಿನ ಯಾವುದೇ ಸವಾಲನ್ನು ಕೂಡ ಎದುರಿಸಬಹುದು ಎಂದು ನನಗೆ ಅನಿಸಿತ್ತು. ಅದಾಯ್ ಸಿನಿಮಾ ನನಗೆ ಶಕ್ತಿ ಹಾಗೂ ಟೀಂ ಸ್ಪಿರಿಟ್ ನೀಡಿದೆ ಎಂದು ಹೇಳಿದ್ದಾರೆ. ಸದ್ಯ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments