ಮಗಳು ಜಾನಕಿ ಧಾರವಾಹಿಯ ಪಾತ್ರಧಾರಿ ಅಪಘಾತದಲ್ಲಿ ನಿಧನ..!!
ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿಗಳಲ್ಲಿ ಮಗಳು ಜಾನಕಿ ಕೂಡ.. ರಸ್ತೆ ಅಪಘಾತದಲ್ಲಿ ಮಗಳು ಜಾನಕಿ ಧಾರವಾಹಿಯ ಪಾತ್ರಧಾರಿ ಸಾವನ್ನಪ್ಪಿದ್ದಾರೆ. ಖ್ಯಾತ ಕಿರುತೆರೆ ನಟಿ ಎಮ್.ವಿ ಶೋಭಾ ನಿನ್ನೆ ನಡೆದಿರುವ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿತ್ರದುರ್ಗದ ಹೊರವಲಯ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಶೋಭಾ ಸೇರಿದಂತೆ ಐವರು ಸಾವನ್ನಪ್ಪಿದ್ದುಇನ್ನೂ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಬಾಗಲಕೋಟೆ ಜಿಲ್ಲೆಯ ಬದಾಮಿ ಬನಶಂಕರಿ ದೇವಾಲಯಕ್ಕೆ ಹೋಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದ್ದು ಅವರನ್ನು ಚಿತ್ರದುರ್ಗ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯಿಂದ ಕಾರು ಸಂಪೂರ್ಣ ಜಖಂ ಆಗಿದ್ದು, ಸ್ಥಳಕ್ಕೆ ಚಿತ್ರದುರ್ಗ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗಳು ಜಾನಕಿಯಲ್ಲಿ ಶೋಭಾ ಅವರು ಮಂಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆನಂದ್ ಬೆಳಗೂರ್ ತಾಯಿಯಾಗಿ ಅದ್ಭುತ ಅಭಿನಯ ಮಾಡುತ್ತಿದ್ದ ಮಂಗಳಕ್ಕ ಇನ್ಮುಂದೆ ನೆನಪು ಮಾತ್ರ. ಶೋಭಾ ಅವರ ನಿಧನಕ್ಕೆ ಮಗಳು ಜಾನಕಿ ಧಾರಾವಾಹಿ ತಂಡ ಮತ್ತು ಅಭಿಮಾನಿ ಬಳಗ ಸಂತಾಪ ಸೂಚಿಸಿದೆ. ಇನ್ನು ಶೋಭಾ ನೆನಪು ಮಾತ್ರ ಎಂದು ಧಾರವಾಹಿಯ ತಂಡ ಬೇಸರ ವ್ಯಕ್ತ ಪಡಿಸಿದ್ದಾರೆ.
Comments