ಕಿಸ್ಸಿಂಗ್ ಸೀನ್ ಇರೋದಕ್ಕೆ ಈ ಸಿನಿಮಾವನ್ನು ರಿಜೆಕ್ಟ್ ಮಾಡುದ್ರಂತೆ ಪಿಂಪಲ್ ಕ್ವೀನ್..!!

17 Jul 2019 1:54 PM | Entertainment
495 Report

ಸದ್ಯ ಹೆಚ್ಚು ಸುದ್ದಿಯಲ್ಲಿರುವ ನಟಿಯೆಂದರೆ ಕರ್ನಾಟಕದ ಕರ್ಶ್ ರಶ್ಮಿಕಾ ಮಂದಣ್ಣ.. ಸದ್ಯ ರಶ್ಮಿಕಾ ಅಭಿನಯದ ಡಿಯರ್ ಕಾಮ್ರೆಡ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಸಾಂಗ್ಸ್ ಮತ್ತು ಟ್ರೇಲರ್’ನಿಂದಾನೆ ಸಖತ್ ಸದ್ದು ಮಾಡಿ ಅಭಿಮಾನಿಗಳ ಮನ ಗೆದ್ದಿದೆ.. ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮತ್ತೊಮ್ಮೆ ಸ್ಕ್ರೀನ್ ಷೇರ್ ಮಾಡಿ ಸಿನಿಮಾದಲ್ಲಿ ಮೋಡಿ ಮಾಡಿದ್ದಾರೆ.  ಇದೆಲ್ಲದರ ನಡುವೆ ವಿಜಯ್ ದೇವರಕೊಂಡ ಇಂಟ್ರೆಸ್ಟಿಂಗ್​ ವಿಷ್ಯವೊಂದನ್ನ ಬಿಚ್ಚಿಟ್ಟಿದ್ದಾರೆ.

ಎಸ್.. ಡಿಯರ್ ಕಾಮ್ರೇಡ್ ಸಿನಿಮಾದ ನಾಯಕಿಯ ಪಾತ್ರಕ್ಕೆ ಮೊದಲು ಆಪ್ರೋಚ್ ಮಾಡಿದ್ದು ಪಿಂಪಲ್ ಕ್ವೀನ್ ಸಾಯಿ ಪಲ್ಲವಿಯನ್ನ ಅಂತೆ.. ರೌಡಿ ಬೇಬಿ ಸಾಯಿ ಪಲ್ಲವಿ ಈ ಸಿನಿಮಾಕ್ಕೆ ಪಕ್ಕಾ ಸೂಟ್ ಆಗ್ತಾರೆ. ಈ ಸಿನಿಮಾದಲ್ಲಿ ಹಿರೋಯಿನ್ ಕ್ರಿಕೆಟ್ ಪ್ಲೇಯರ್ ಆಗಿರುತ್ತಾರೆ..  ಹೀಗಾಗಿ ಸಾಯಿ ಪಲ್ಲವಿ ಈ ಕ್ಯಾರೆಕ್ಟರ್ ಮಾಡಿದ್ರೆ ಚೆನ್ನಾಗಿರುತ್ತೇ ಅಂತಾ ನಿರ್ದೇಕರು ಹಾಗೂ ನಿರ್ಮಾಪಕರ ಓಪಿನಿಯನ್ ಆಗಿತ್ತಂತೆ… ಆದರೆ ಕಥೆ ಕೇಳಿದ ಸಾಯಿ ಪಲ್ಲವಿ ಅದ್ಯಾಕೋ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲವಂತೆ. ನಿರ್ಮಾಪಕರಿಗೆ ರಶ್ಮಿಕಾ ಮಂದಣ್ಣ ಅಥವಾ ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ಆಕ್ಟ್ ಮಾಡಬೇಕಿತ್ತಂತೆ. ಸಾಯಿ ಪಲ್ಲವಿ ರಿಜೆಕ್ಟ್ ಮಾಡಿರೋದ್ರಿಂದ ಈ ಆಫರ್ ರಶ್ಮಿಕಾ ಸಿಕ್ಕಿದೆ.  ಸಿನಿಮಾನೇ ಬೇರೆ, ಫ್ರೆಂಡ್​ಶಿಪ್ ಬೇರೇ ಅಂತಾ ವಿಜಯ್ ಸಮರ್ಥನೆ ಮಾಡಿಕೊಂಡಿದ್ರು. ಅಂದಹಾಗೆ ಸಾಯಿ ಪಲ್ಲವಿ ಈ ಸಿನಿಮಾ ರಿಜೆಕ್ಟ್​ ಮಾಡೋದಕ್ಕೆ ಕಾರಣ ಕಿಸ್ಸಿಂಗ್​ ದೃಶ್ಯಗಳು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಡಿಯರ್ ಕಾಮ್ರೇಡ್ ಸಿನಿಮಾ ಇದೇ ತಿಂಗಳ 26 ರಂದು ಬಿಡುಗಡೆಯಾಗಲಿದೆ.

Edited By

Manjula M

Reported By

Manjula M

Comments