ನಾನು ಜೀವಂತವಾಗಿದ್ದೇನೆ ಎಂದು ವಿಡಿಯೋ ಮಾಡಿದ ನಟ ದ್ವಾರಕೀಶ್..!!

16 Jul 2019 2:58 PM | Entertainment
263 Report

ಕರ್ನಾಟಕದ ಕುಳ್ಳ, ಹಿರಿಯ ನಟ ದ್ವಾರಕೀಶ್ ಆರೋಗ್ಯದ ಬಗ್ಗೆ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.. ದ್ವಾರಕೀಶ್ ಇನ್ನಿಲ್ಲ ಎಂಬ ವದಂತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.. ಇದೀಗ ದ್ವಾರಕೀಶ್ ಅವರೇ ಅದಕ್ಕೆಲ್ಲಾ ಸ್ಪಷ್ಟನೆ ನೀಡಿದ್ದಾರೆ.  ಹಿರಿಯ ನಟ-ನಿರ್ದೇಶಕ ದ್ವಾರಕೀಶ್ ಆರೋಗ್ಯವಾಗಿದ್ದಾರೆ. ಮನೆಯಲ್ಲಿ ದೇವರಿಗೆ ಪೂಜೆ ಮಾಡುತ್ತಾ ತಮ್ಮ ಅಭಿಮಾನಿಗಳಿಗೆ ನಾನು ಚೆನ್ನಾಗಿದ್ದೇನೆ ಎನ್ನುವ ಸಂದೇಶವನ್ನು ದ್ವಾರಕೀಶ್ ರವಾನಿಸಿದ್ದಾರೆ.

ಕಳೆದೊಂದು ದಿನದಿಂದ ಸೋಷಿಯಲ್ ಮೀಡಿಯಾದಲ್ಲಿ ದ್ವಾರಕೀಶ್ ಇನ್ನಿಲ್ಲ ಎಂಬ ಸುಳ್ಳು ವದಂತಿಯೊಂದು ಹರಿದಾಡುತ್ತಿದೆ.. ಇದನ್ನ ನೋಡಿದ ಅಭಿಮಾನಿಗಳು ಸಂತಾಪವನ್ನು ಕೂಡ ವ್ಯಕ್ತಪಡಿಸಿದ್ದರು. ಆದರೆ ಈ ಬಗ್ಗೆ ತಿಳಿದ ದ್ವಾರಕೀಶ್ ಅವರು ಪ್ರತಿಕ್ರಿಯಿಸಿ, ಇದು ಸುಳ್ಳು ಸುದ್ದಿ, ನಾನು ಚೆನ್ನಾಗಿದ್ದೇನೆ, ಆರೋಗ್ಯವಾಗಿದ್ದೇನೆ. ನನಗೆ ಏನೂ ಆಗಿಲ್ಲ ಎಂದು ವಿಡಿಯೋ ಒಂದರ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.  ನಮಸ್ಕಾರ, ನಿಮ್ಮ ಪ್ರೀತಿಯ  ದ್ವಾರಕೀಶ್, ಕರ್ನಾಟಕದ ಕುಳ್ಳ ಆರೋಗ್ಯವಾಗಿದ್ದೇನೆ. ಯಾವುದೇ ತರಹದ ಸುಳ್ಳು ವದಂತಿಯನ್ನು ಯಾರು  ನಂಬಬೇಡಿ. ನನಗೆ  ಏನೇ ಆದರೂ ನಿಮಗೂ ಕೂಡ ಗೊತ್ತಾಗುತ್ತೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ನಿಮ್ಮ ದ್ವಾರಕೀಶ್ ಚೆನ್ನಾಗಿದ್ದಾನೆ. ಚೆನ್ನಾಗಿದ್ದೀನಿ, ಚೆನ್ನಾಗಿರುತ್ತೀನಿ ಎಲ್ಲಾ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಎಂದು ದೇವರಿಗೆ ಪೂಜೆ ಸಲ್ಲಿಸುತ್ತಿರುವ ವಿಡಿಯೋವನ್ನು ಮಾಧ್ಯಮಗಳಿಗೆ ಕಳುಹಿಸಿ  ಸುಳ್ಳು ವದಂತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಪೋಸ್ಟ್ ಮಾಡುವ ಮೊದಲು ಸಾಕಷ್ಟು ಬಾರಿ ಯೋಚನೆ ಮಾಡಬೇಕಾಗುತ್ತದೆ.. ಇಲ್ಲವಾದರೆ ಈ ರೀತಿಯಾಗುವುದು ಸಾಮಾನ್ಯ

Edited By

Manjula M

Reported By

Manjula M

Comments