ಕಿರುತೆರೆಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಸ್ಟಾರ್ ನಟಿ..!!

16 Jul 2019 11:21 AM | Entertainment
159 Report

ಇತ್ತಿಚಿಗೆ ಕಿರುತೆರೆಯಲ್ಲಿ ಧಾರವಾಹಿಯಲ್ಲಿ ಪರ್ವ ಜೋರಾಗಿಯೇ ನಡೆಯುತ್ತಿದೆ.. ಸಿನಿಮಾಗಳಿಗಿಂತ ಹೆಚ್ಚು ಬೇಡಿಕೆ ಧಾರವಾಹಿಗೆ ಇದೆ.. ಚಂದನವನದ ಹಿರಿಯ ಕಲಾವಿದರು ಧಾರವಾಹಿಗೆ ಬರುವುದು ಕಾಮನ್ ಆಗಿಬಿಟ್ಟಿದೆ..  ಇತ್ತೀಚೆಗೆ ಹಿರಿಯ ಸಿನಿ ಕಲಾವಿದರು ಕಿರುತೆರೆಯತ್ತ ಮುಖ ಮಾಡುವುದು ಹೊಸದೇನಲ್ಲ. ಹಿರಿಯ ನಟ ನಟಿಯರು ಹೆಚ್ಚಾಗಿ ಕಿರುತೆರೆಯಲ್ಲಿ ತಾಯಿ ತಂದೆ, ಅತ್ತೆ ಮಾವ ಇಲ್ಲವೇ ವಿಲನ್ ಪಾತ್ರಗಳಲ್ಲಿ ಅಭಿನಯಿಸುತ್ತಾರೆ.

ಇದೀಗ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಂ.1 ನಾಯಕಿ ನಟಿಯಾಗಿ ಅಭಿನಯಿಸಿದ್ದ ಶ್ರುತಿ ಇದೀಗ ಕಿರುತೆರೆಯ ಧಾರವಾಹಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುವ 'ಸೇವಂತಿ' ಧಾರವಾಹಿಯ ನೂರನೇ ಸಂಚಿಕೆಯಲ್ಲಿ ಶ್ರುತಿ ಸ್ಪೆಷಲ್ ಗೆಸ್ಟ್ ಆಗಿ ಪಾಲ್ಗೊಂಡಿದ್ದಾರೆ. ಆದರೆ ಶ್ರುತಿ ಮುಂದೆಯೂ ಧಾರವಾಹಿಯಲ್ಲಿ ಕಂಟಿನ್ಯೂ ಆಗುತ್ತಾರಾ, ಒಂದೇ ಸಂಚಿಕೆಗಾಗಿ ಬಂದಿದ್ದಾರಾ ಅಥವಾ ಶ್ರುತಿ ಎಂಟ್ರಿ ಕೊಟ್ಟಿದ್ದೇಕೆ ಎಂಬುದು ಸಸ್ಪೆನ್ಸ್ ಆಗಿಯೇ ಉಳಿದಿದೆ.. ಸಾಕಷ್ಟು ಚಂದನವನದ ಹಿರಿಯ ಕಲಾವಿದರು ಕಿರಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಸಿನಿಮಾದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ ಆಗುತ್ತಿದೆ. ಹಾಗಾಗಿ ಕಲಾವಿದರು ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

Edited By

Manjula M

Reported By

Manjula M

Comments