ಬಾಲಿವುಡ್’ನ ಸುಂದರಿ ಶ್ರೀ ದೇವಿ ಸಹಜ ಸಾವಲ್ಲ..!! ಕೊಲೆ..!!!

15 Jul 2019 5:53 PM | Entertainment
497 Report

ಬಾಲಿವುಡ್’ನ ಅತಿಲೋಕ ಸುಂದರಿ ಶ್ರೀದೇವಿ ನಮ್ಮನ್ನೆಲ್ಲಾ ಅಗಲಿ ಒಂದು ವರ್ಷದ ಮೇಲಾಗಿದೆ. ಬಾಲಿವುಡ್ ದಂತಕತೆಯಾದ,  ಅತಿಲೋಕ ಸುಂದರಿ ಶ್ರೀದೇವಿ ಸಾವನ್ನಪ್ಪಿ ಒಂದು ವರ್ಷದ ಮೇಲಾಗಿದೆ. ಆದರೂ ಕೂಡ ಅವರ ಸಾವಿನ ಬಗ್ಗೆ ಇನ್ನೂ ಸಾಕಷ್ಟು ಅನುಮಾನಗಳು ಮುಂದುವರೆಯುತ್ತಲೇ ಇವೆ. ಆದರೂ ಅದು ಅನುಮಾನವಾಗಿಯೇ ಇದೆ.. ಫೆ. 24 2018 ರಂದು ಮುಂಬೈನ ಪ್ರತಿಷ್ಠಿತ ಹೊಟೇಲ್ ವೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.

ಆದರೆ ಇದನ್ನು ಕೆಲವರು ಆಕಸ್ಮಿಕ ಸಾವು ಎಂದರೆ ಮತ್ತೆ ಕೆಲವರು ಕೊಲೆ ಎಂದು ಶಂಕೆಯನ್ನು ವ್ಯಕ್ತ ಪಡಿಸಿದ್ದಾರೆ. ಆದರೆ ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಾತ್ ಟಬ್ ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಕೇರಳ ಜೈಲು ಡಿಜಿಪಿ ರಿಶಿರಾಜ್ ಸಿಂಗ್ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಇದು ಸಹಜ ಸಾವಲ್ಲ. ಕೊಲೆಯಾಗಿರಬಹುದು ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ನನ್ನ ಸ್ನೇಹಿತ ಡಾ. ಉಮಾದತನ್ ಬಳಿ ಶ್ರೀದೇವಿ ಸಾವಿನ ಬಗ್ಗೆ ಕೇಳಿದಾಗ ಇದು ಸಹಜ ಸಾವಲ್ಲ. ಕೊಲೆಯಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ.  ಉಮಾದತನ್ ಪ್ರಕಾರ, ಎಷ್ಟೇ ಪಾನಮತ್ತರಾಗಿದ್ದರೂ ಒಂದು ಅಡಿಯಿಂದ ಮುಳುಗಿ ಯಾರೂ ಸಾಯುವುದಿಲ್ಲ. ಯಾರಾದರೂ ಬಲವಂತವಾಗಿ ತಲೆಯನ್ನು ನೀರಿನಲ್ಲಿ ಮುಳುಗಿಸಿದರೆ ಮಾತ್ರ ಸಾಯುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ. ಹಾಗಾಗಿ ಇದು ಸಹಜ ಸಾವಲ್ಲ. ಬದಲಾಗಿ ಕೊಲೆ ಎಂದಿದ್ದಾರೆ. ಒಟ್ಟಿನಲ್ಲಿ ಸತ್ತ ಮೇಲೆ ಸಾಕಷ್ಟು ಅನುಮಾನಗಳು ಹುಟ್ಟಿದ್ದು ಪತಿ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ..

Edited By

Manjula M

Reported By

Manjula M

Comments