ಮಗಳ ಫೋಟೋವನ್ನು ರಿವೀಲ್ ಮಾಡಿದ ‘ವರದನಾಯಕ’ನ ನಾಯಕಿ

15 Jul 2019 4:57 PM | Entertainment
413 Report

ಇತ್ತಿಚಿಗೆ ಬಹುಭಾಷ ನಟಿ ಸಮೀರಾರೆಡ್ಡಿ ಸಖತ್ ಸುದ್ದಿಯಾಗಿದ್ದರು.. ಇತ್ತಿಚಿಗಷ್ಟೆ ತುಂಬು ಗರ್ಭಿಣಿಯಾಗಿದ್ದ ಸಮೀರಾ ಅಂಡರ್ ವಾಟರ್ ಪೋಟೋ ಶೂಟ್ ಮಾಡಿಸಿ ಟ್ರೋಲಿಗರ ಬಾಯಿಗೆ ಆಹಾರವಾಗಿ ಬಿಟ್ಟಿದ್ದರು. ಈ ಬಗ್ಗೆ ಮಾತನಾಡಿದ ಸಮೀರಾ, ನಾನು ಈ ಫೋಟೋಶೂಟ್ ಮಾಡಿಸುವಾಗ ತುಂಬಾ ಖುಷಿಯಾಗಿದ್ದೆ.. ನಾನು ನನ್ನ ಜೀವನ ವೃತ್ತಿಯಲ್ಲಿ ಮಾಡಿಸಿದ ರೋಮಾಂಚಕ ಫೋಟೋಶೂಟ್‍ಗಳಲ್ಲಿ ಇದು ಕೂಡ ಒಂದು ಎಂದು ಸಂತಸ ಪಟ್ಟಿದ್ದರು. . ಅಷ್ಟೆ ಅಲ್ಲದೆ ಕೆಲವು ಅಭಿಮಾನಿಗಳು, ಗರ್ಭಿಣಿಯಾಗಿರುವ ಸಮಯದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವುದು ಸರಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಹೇಗೆ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ.

ಇದೀಗ ಬಹುಭಾಷಾ ನಟಿ ಸಮೀರಾ ರೆಡ್ಡಿ ಶುಕ್ರವಾರ ಬೆಳಿಗ್ಗೆ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದರು. ಆದರೆ ಅಂದು ಸಮೀರಾ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಆದರೆ ಇಂದು ಸಮೀರಾ ತಮ್ಮ ಮಗಳ ಫೋಟೋವನ್ನು ತನ್ನ ಇನ್‍ಸ್ಟಾಗ್ರಾಂನಲ್ಲಿ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಸಮೀರಾ ತನ್ನ ಮಗಳನ್ನು ತೋಳಿನಲ್ಲಿ ಎತ್ತಿಕೊಂಡಿರುವ ಫೋಟೋವನ್ನು ತೆಗೆದು ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಟೋ ಪೋಸ್ಟ್ ಗೆ ಇದುವರೆಗೂ 39 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಅಭಿಮಾನಿಗಳು ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಸಮೀರಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಹಾಕಿ ಅದಕ್ಕೆ, “ನಮ್ಮ ಮನೆಗೆ ಬೆಳಗ್ಗೆ ಏಂಜೆಲ್ ಆಗಮಿಸಿದ್ದಾಳೆ. ನನ್ನ ಹೆಣ್ಣು ಮಗು. ನಿಮ್ಮ ಪ್ರೀತಿ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದರು. ಇದಕ್ಕೆ ಅಭಿಮಾನಿಗಳು ಕೂಡ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

Edited By

Manjula M

Reported By

Manjula M

Comments

Cancel
Done