ಸ್ಯಾಂಡಲ್’ವುಡ್ ನ ಸ್ಟಾರ್ ಜೋಡಿಯಿಂದ ದಚ್ಚುಗೆ ಸಿಕ್ತು ಸ್ಪೆಷಲ್ ಗಿಫ್ಟ್..!!

15 Jul 2019 12:45 PM | Entertainment
506 Report

ಚಂದನವನದಲ್ಲಿ ನಟ ನಟಿಯರಿಗೆ ಅಭಿಮಾನಿಗಳು ಗಿಫ್ಟ್ ಗಳನ್ನು ಕೊಡುವುದು ಕಾಮನ್… ಅದರಲ್ಲೂ ಡಿ ಬಾಸ್ ಗೆ ಹೆಚ್ಚು ಫ್ಯಾನ್ಸ್ ಇರೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯವೇ..  ಸಾಮಾನ್ಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳು ಸಾಕಷ್ಟು ಉಡುಗೊರೆ ನೀಡುತ್ತಿರುತ್ತಾರೆ. ಆದರೆ ಇದೀಗ ನಟ ಚಿರಂಜೀವಿ ಸರ್ಜಾ ಮತ್ತು ಅವರ ಪತ್ನಿ ಮೇಘನಾ ರಾಜ್ ಒಂದು ವಿಶೇಷ ಗಿಫ್ಟ್ ನೀಡಿದ್ದಾರೆ. ದರ್ಶನ್ ಅವರು ಚಿರಂಜೀವಿ ಸರ್ಜಾ ಮತ್ತು ಅವರ ಪತ್ನಿ ಮೇಘನಾ ರಾಜ್ ಅವರ ಅನೇಕ ಸಿನಿಮಾಗಳಿಗೆ ದಚ್ಚು ಸಾಥ್ ನೀಡಿದ್ದಾರೆ.

ಅಷ್ಟೆ ಅಲ್ಲದೆ ದರ್ಶನ್ ಅವರಿಗೆ ಪ್ರಾಣಿಗಳು ಅಂದರೆ ತುಂಬ ಇಷ್ಟ ಅನ್ನೋದು ಎಲ್ಲರಿಗೂ ಕೂಡ ಗೊತ್ತಿರುವ ವಿಷಯವೇ.. ಇದೇ ಹಿನ್ನೆಲೆಯಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್  ದರ್ಶನ್ ಅವರಿಗೆ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಚಿರು ದಂಪತಿ ತಮ್ಮ ಮನೆಯ ಬೀಮಾ ಎಂಬ ನಾಯಿಯ ಮಗನನ್ನು ದರ್ಶನ್ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ಬಗ್ಗೆ ಮೇಘನಾ ರಾಜ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಟ ದರ್ಶನ್ ಸರ್ ನಮ್ಮ ಕುಟುಂಬ ಸ್ಪೆಷಲ್ ಪರ್ಸನ್ ಆಗಿದ್ದಾರೆ. ಅವರ ಪ್ರೋತ್ಸಾಹಕ್ಕೆ ನಮ್ಮ ಪುಟ್ಟ ಉಡುಗೊರೆ ಇದು ಎಂದು ಇನ್‍ಸ್ಟಾಗ್ರಾಂನಲ್ಲಿ  ಬರೆದುಕೊಂಡಿದ್ದಾರೆ. ದರ್ಶನ್ ಅವರಿಗೆ ಚಿರು ನಾಯಿಮರಿಯನ್ನು ನೀಡುವಾಗ ಫೋಟೋ ತೆಗೆದುಕೊಂಡಿದ್ದು ಆ ಫೋಟೋವನ್ನು ಮೇಘನಾ ಅವರು ಸಾಮಾಜಿಕ ಜಾಲತಾಣಗಳಲ್ಲಿ  ಹಂಚಿಕೊಂಡಿದ್ದಾರೆ. ದರ್ಶನ್ ನಟನೆಯ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಮೇಘನಾ ರಾಜ್ ಕೂಡ ಅಭಿನಯಸಿದ್ದಾರೆ. ಆಗಸ್ಟ್ 2ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು ಅಭಿಮಾನಿಗಳು ದಚ್ಚು ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ.  

Edited By

Manjula M

Reported By

Manjula M

Comments