ಲಂಡನ್ ನಲ್ಲಿ ಇಂದು ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ..!! ಅಭಿಮಾನಿಗಳಿಂದ ಹೋಮ ಹವನ

10 Jul 2019 5:10 PM | Entertainment
529 Report

ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರಿಗೆ ಇಂದು ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಅಭಿಮಾನಿಗಳು ಶಿವಣ್ಣ ಬೇಗ ಗುಣಮುಖರಾಗಿ ಬರಲಿ ಎಂದು ಹೋಮ ಹವನಗಳನ್ನು ಮಾಡಿಸುತ್ತಿದ್ದಾರೆ. ಇಂದು ಲಂಡನ್‍ನಲ್ಲಿ ಶಿವರಾಜ್ ಕುಮಾರ್ ಭುಜದ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ.. ಹಾಗಾಗಿ `ಶಿವರಾಜ್ ಕುಮಾರ್ ಸೇನಾ ಸಮಿತಿ’ ಶಸ್ತ್ರಚಿಕಿತ್ಸೆ ಯಶಸ್ವಿ ಆಗಲಿ ಎಂದು ಗವಿಪುರಂ ಶಿವನ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮವನ್ನು ಮಾಡಿಸುತ್ತಿದ್ದಾರೆ.

ಈ ಬಾರಿಯ ಹುಟ್ಟುಹಬ್ಬಕ್ಕೆ ನಾನು ನಿಮ್ಮ ಜೊತೆ ಇರುವುದಿಲ್ಲ. ಹುಟ್ಟುಹಬ್ಬ ಮಾಡುತ್ತಿಲ್ಲ ಎಂದು ಅಲ್ಲ. ಆ ದಿನ ನನ್ನ ಶಸ್ತ್ರಚಿಕಿತ್ಸೆ ಇದೆ. ನನಗೆ ಭುಜದ ನೋವು ಆಗಾಗ ಕಾಣಿಸುತ್ತಿದೆ. ಹಾಗಾಗಿ ನಾನು ಶಸ್ತ್ರಚಿಕಿತ್ಸೆಗೆ ಹೋಗಬೇಕಾಗುತ್ತದೆ. ಹುಟ್ಟುಹಬ್ಬದ ನಂತರ ಹೋಗೋಣ ಎಂದುಕೊಂಡೆ. ಆದರೆ ನನಗೆ ಬೇರೆ ದಿನ ಅಪಾಯಿಂಟ್‍ಮೆಂಟ್ ಸಿಗಲಿಲ್ಲ. ಇದನ್ನು ಮಿಸ್ ಮಾಡಿದ್ರೆ ಆಗಸ್ಟ್ ವರೆಗೂ ಕಾಯಬೇಕು. ಹಾಗಾಗಿ ನಾನು ಲಂಡನ್‍ಗೆ ಹೋಗಲೇಬೇಕು ಎಂದಿದ್ದರು.ಬಳಿಕ ಮಾತನಾಡಿ, ಅಗಸ್ಟ್ ವರೆಗೂ ಕಾಯಬೇಕೆಂದರೆ ನೋವು ಜಾಸ್ತಿ ಆಗುತ್ತದೆ. ಆಗ ನನ್ನ ಸಮಸ್ಯೆ ಜಾಸ್ತಿ ಆಗುತ್ತದೆ. ನನಗೆ ಭುಜದ ನೋವಿದೆ. ಶಾರೂಕ್ ಖಾನ್ ಹಾಗೂ ಎಸ್. ಎಂ ಕೃಷ್ಣ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ನನಗೆ ಚಿಕಿತ್ಸೆ ನೀಡುತ್ತಾರೆ ಎಂದು ತಿಳಿಸಿದ್ದರು.. ಹಾಗಾಗಿ ಅಭಿಮಾನಿಗಳು ಮನೆಯ ಬಳಿ ಬರಬೇಡಿ ನಾನು ಇರುವುದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಶಿವಣ್ಣ ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ಪೂಜೆ, ಪುನಸ್ಕಾರ, ಹೋಮ ಹವನ ಮಾಡಿಸುತ್ತಿದ್ಧಾರೆ.

Edited By

Manjula M

Reported By

Manjula M

Comments